ಮರಿಯಮ್ಮ ದೇವಿ ಜಾತ್ರಾ ಮಹೋತ್ಸವ

ಹುಮನಾಬಾದ್ : ಜು.19:ಜಾತ್ರೆಗಳು ಸಾಮರಸ್ಯದ ಸಂಕೇತವಾಗಿವೆ . ಎಲ್ಲಾ ಸಮುದಾಯ ದವರನ್ನೂ ಒಗ್ಗೂಡಿಸುತ್ತವೆ ಎಂದು ಶಾಸಕ ರಾಜಶೇಖರ ಪಾಟೀಲ್ ಹೇಳಿದರು . ತಾಲೂಕಿನ ಘಾಟಬೋರಳ ತಾಂಡಾದಲ್ಲಿ ಸೇವಾಲಾಲ ಮಹಾರಾಜ ಹಾಗೂ ಮರಿಯಮ್ಮ ದೇವಿ ಜಾತ್ರಾ ಮಹೋತ್ಸವದ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿದರು . ಸಕಲ ಜೀವಿಗಳ ಕಲ್ಯಾಣ ಬಯಸುವುದೇ ಧರ್ಮವಾಗಿದೆ.ಎಲ್ಲರೂ ಧರ್ಮದ ತಳಹದಿಯ ಮೇಲೆ ನಿಂತು ಸನ್ಮಾರ್ಗದಲ್ಲಿ ಮುನ್ನಡೆಯಬೇಕು . ಈ ಕಾರ್ಯ ಯಶಸ್ವಿಯಾಗಬೇಕಾದರೆ ಆಧ್ಯಾತ್ಮ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದರು .
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸ್ಥಳೀಯ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ನಿಸ್ವಾರ್ಥ ಸೇವೆ ಸಲ್ಲಿಸಬೇಕು . ಜನರ ಸಮಸ್ಯೆಗೆ ಸ್ಪಂಧಿಸುವ ಮಾಲಕ ಉತ್ತಮವಾಗಿ ಕೆಲಸ ನಿರ್ವಹಿಸಬೇಕು . ಗ್ರಾಮ ಪಂಚಾಯಿತಿ ವತಿಯಿಂದ ದೊರೆಯುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗ್ರಾಮ ಅಭಿವೃದ್ಧಿ ಮಾಡಬೇಕು.ಸರಕಾರಿ ಸೌಲಭ್ಯಗಳನ್ನು ಪ್ರತಿ ಮನೆ ಮನೆಗಳಿಗೆ ತಲುಪಿಸಬೇಕು ಎಂದರು .
ಈ ವೇಳೆ ರಾಜಕುಮಾರ ಪಾಟೀಲ್ , ರಂಜಿತ ಮಾನಕರ , ಕಿಶನ ಹರ್ಜುನಾಯಕ , ವಿಲಾಸ ಜಾಧವ ಶಾಂತಾಬಾಯಿ ಜಾಧವ , ಮನೋಜಕುಮಾರ ಭೋಸೈ ರಂಜೀತ ಮಾನಕರೆ , ಅಂಬಾಜಿ ಜಾಧವ , ಬಾಲಾಜಿ ರೆಡ್ಡಿಯಾಚೆ , ದಾಮೊಜಿ ಜಾಧವ , ವಿಷ್ಣು ಜಮಾಧರ , ನಾಗುರೆಡ್ಡಿ ರವಿ ಮಾಲೆ , ರಾಜು ರಾಠೋಡ್ , ಬಾಬುರಾವ ರಾಠೋಡ್ , ಹಿರಾಲಾಲ್ ಜಾಧವ , ನರಸಿಂಗ ಜಾಧವ , ಶಾಬೊದ್ದಿನ್ ಘೋಡವಾಡಿ , ಮನೋಹರ , ಗಣಪತಿ ಜಾಧವ , ವಿಜಯಕುಮಾರ ಜಾಧವ , ಸುನೀಲ್ ಜಾಧವ , ಸಂತೋಷ ಜಾಧವ , ಸಂಜು ಜಾಧವ , ಗೋಪಾಳ ಜಾಧವ ಇದ್ದರು .