ಮರಿಯಮ್ಮನಹಳ್ಳಿಯ ಸರಳವಾಗಿ ವಾಲ್ಮೀಕಿ ಜಯಂತಿ ಆಚರಣೆ

ಮರಿಯಮ್ಮನಹಳ್ಳಿ, ನ.01: ಪಟ್ಟಣದ 9ನೇ ವಾರ್ಡಿನ ವಾಲ್ಮೀಕಿ ಸಮುದಾಯ ಭವನದಲ್ಲಿ ಶನಿವಾರ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪಟ್ಟಣ ಮತ್ತು ಮರಿಯಮ್ಮನಹಳ್ಳಿ ಹೋಬಳಿ ವಾಲ್ಮೀಕಿ ನಾಯಕ ಸಮಾಜದವರು ಸರಳವಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿ ಜಗತ್ತಿಗೆ ವಾಲ್ಮೀಕಿಯವರು ನೀಡಿದ ಸಂದೇಶಗಳನ್ನು ಸ್ಮರಿಸುತ್ತ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ ಹೋಬಳಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಮರಡಿ ಹನುಮಂತ, ಪಟ್ಟಣ ವಾಲ್ಮೀಕಿ ಸಮಾಜದ ಅಧ್ಯಕ್ಷ ರೋಗಣ್ಣನವರ ಮಂಜುನಾಥ, ಪ್ರಧಾನ ಕಾರ್ಯದರ್ಶಿ ಬಿ.ಪರಶುರಾಮ, ಖಜಾಂಚಿ ತಳವಾರ ಬಸವರಾಜ, ಸಮಾಜದ ಮುಖಂಡರಾದ ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ತಳವಾರ ಸೋಮಶೇಖರ, ಪತ್ರಕರ್ತ ಡಿ.ಮಂಜುನಾಥ, ಈಶ್ವರ, ಕಟಿಗಿ ರವಿಕುಮಾರ್, ಕಾಸ್ಲಿ ಅಂಕ್ಲೇಶ್, ಹೆಚ್.ರಮೇಶ್, ರಾಘವೇಂದ್ರ, ಟೈಲರ್ ಅಂಕ್ಲೇಶ್, ಬಾಪುರಿ ರಾಜ, ಸುರೇಶ್, ನೀರಗಂಟಿ ಹುಲಿರಾಜ, ಮಂಜುನಾಥ, ಹಾಗೂ ವಾಲ್ಮೀಕಿ ಸಮಾಜದ ಮಹಿಳಾ ಸಂಘದ ಪದಾಧಿಕಾರಿಗಳು ಮತ್ತು ನೌಕರ ಸಂಘದ ಪದಾಧಿಕಾರಿಗಳು ಹಾಗೂ ಇತರರು ಇದ್ದರು.