ಮರಾಠ ಸಮುದಾಯಕ್ಕೆ 50 ಕೋಟಿ : ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಮಿತಿ ಆಕ್ಷೇಪ

ಬಳ್ಳಾರಿ, ನ.18: ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಮರಾಠ ಅಭಿವೃದ್ಧಿ ನಿಗಮ‌ ರಚಿಸಿ ಅದಕ್ಕೆ 50 ಕೋಟಿ ರೂ ಅನುದಾನ‌ ನೀಡಿರುವುದಕ್ಕೆ
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಇಂದು ಈ‌ ಕುರಿತ ಮನವಿಯನ್ನು ಜಿಲ್ಲಾಧಿಗಳಿಗೆ ಸಲ್ಲಿಸಿ. ಮರಾಠ ಸಮುದಾಯಕ್ಕೆ 50 ಕೋಟಿ ರೂಪಾಯಿಗಳು ಮೀಸಲಿಟ್ಟಿರುವುದು ಖಂಡನೀಯ ಹಾಗೂ ಜನಾ ಸಮಾನ್ಯರಿಗೆ ಇದು ವಿರುದ್ದ ವಾದುದಾಗಿದೆ.
ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದಾಗಿ ಎಷ್ಟೋ ಜನ ಮನೆಗಳಿಲ್ಲದೇ ಬೀದಿಗೆ ಬಿದ್ದರೂ ಸರ್ಕಾರ ಆ ಕಡೆ ತಿರುಗಿಯೂ ನೋಡಿಲ್ಲ.
ರೈತರು ಬೆಳೆದ ಬಳೆ ಕೈಗೆ ಸಿಗದೇ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು.
ಬೆಳೆ ಪರಿಹಾರಕ್ಕಾಗಿ ಮತ್ತು ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರು ಪುನರ್ವಸತಿ ಗಾಗಿ ಬೇಡಿಕೆ ಇಟ್ಟರೂ ಸರಕಾರ ಕರೋನ ನೆಪ ಹೇಳಿಕೊಂಡು ಬಜೆಟ್ ಇಲ್ಲ ಎಂದು ಸಬೂಬು ನೀಡಿತ್ತು.
ಈಗ ಮರಾಠ ಸಮುದಾಯಕ್ಕೆ 50 ಕೋಟಿ ರುಪಾಯಿ ಎಲ್ಲಿಂದ ಬಂತು ಎಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಪಿ.ಎಂ ಈಶ್ವರಪ್ಪ ಹಾಗೂ ಯುವ ಘಟಕದ ಅಧ್ಯಕ್ಷ
ವೆಂಕಟೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದ ನೆರೆ ಹಾವಳಿಗೆ ತುತ್ತಾದ ರೈತರಿಗೆ ಹಾಗೂ ನಿರ್ಗತಿಕರಿಗೆ ಈ ಕೂಡಲೇ ಹಣ ಬಿಡುಗಡೆಗೆ ಆದೇಶ ಹೊರಡಿಸಬೇಕೆಂದು ಸಮಿತಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.
ಮನವಿ ಪತ್ರ ಸ್ವೀಕರಿಸಿ ತಹಶಿಲ್ದಾರ ರಾದ ಗುರು ರಾಜ ಅವರು ಈ ಕೂಡಲೇ ಸರಕಾರದ ಗಮನಕ್ಕೆ ತರುತ್ತೇವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸಂಸ್ಥಾಪಕ ರಾದ ಪಿ.ಎಂ ಈಶ್ವರಪ್ಪ, ಅಧ್ಯಕ್ಷರಾದ ಈಶ್ವರ್, ಉಪಾಧ್ಯಕ್ಷ ರಾದ ಭಾಸ್ಕರ್, ಖಜಾಂಚಿ ತಿಮ್ಮಪ್ಪ, ನರೇಶ್ ಬಾಬು, ನಾಗೇಂದ್ರ, ಯುವ ಘಟಕದ ಅಧ್ಯಕ್ಷ ವೆಂಕಟೇಶ್, ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿ ಭಾಗವಹಿಸಿದ್ದರು.