ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ


ದಾವಣಗೆರೆ.ನ.೨೦; ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಜಯದೇವ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಕಾಲ್ನಡಿಗೆ ಮುಖಾಂತರ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಾಡು-ನುಡಿ, ಜಲ ವಿಚಾರವಾಗಿ, ರೈತರ ಪರವಾಗಿ, ಕಾರ್ಮಿಕರ ಪರವಾಗಿ, ನೊಂದವರ ಪರವಾಗಿ ಹೋರಾಟಗಳನ್ನು ಮಾಡುತ್ತಾ ಬರುತ್ತಿದ್ದು ಇಂದು ವಿಶ್ವದಾದ್ಯಂತ ಕೊರೋನಾ ಎಂಬ ಮಹಾಮಾರಿ ಒಂದು ಕಡೆ ರಾಜ್ಯವನ್ನು ದಿವಾಳಿ ದಿಕ್ಕಿನ ಕಡೆಗೆ ಕೊಂಡೊಯ್ಯುತ್ತಿದ್ದು, ಉತ್ತರ ಕರ್ನಾಟಕ ಮಳೆಯ ಪ್ರವಾಹದಿಂದ ಕೊಚ್ಚಿ ಹೋಗುತ್ತಿರುವುದು ಮತ್ತು ಅತಿ ಹೆಚ್ಚು ಮಳೆಯಿಂದ ಬೆಳೆಗಳು ನಾಶವಾಗಿರುವ ಸಂದರ್ಭದಲ್ಲಿ ಪ್ರವಾಹ ಪೀಡಿತರಿಗೆ ಮತ್ತು ರೈತರಿಗೆ ಸರ್ಕಾರ ನೆರವು ನೀಡದ ಮರಾಠಿಗರ ಬೇಡಿಕೆಗಳನ್ನು ಈಡೇರಿಸದೇ ಮತ ಭೇಟಿಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರದ ರಚನೆ ಮಾಡುವ ಮೂಲಕ ಮರಾಠಿಗರನ್ನು ಒಲಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ ಮತ್ತು ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಮರಾಠಿಗರು ಎಲ್ಲೂ ಕೂಡ ಸ್ವಾಗತಿಸಿಲ್ಲ ಹಾಗೂ ಪ್ರಾಧಿಕಾರ ರಚನೆಗೆ ಎಲ್ಲೂ ವಿಜಯೋತ್ಸವ ಆಚರಿಸಿದ್ದು ಎಲ್ಲೂ ಕಂಡುಬಂದಿಲ್ಲ ಇದರಿಂದ ನಮಗೆ ತಿಳಿದಿದ್ದು ಮರಾಠಿಗರಿಗೆ ಪ್ರಾಧಿಕಾರ ಅವಶ್ಯಕತೆ ಇಲ್ಲದಿರುವುದು ಅರಿವಾಗುತ್ತದೆ. ಮರಾಠಿಗರು ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯವನ್ನು ಹೋರಾಟಗಳ ಮೂಲಕ ಸರ್ಕಾರದ ಗಮನಕ್ಕೆ ತಂದಿದ್ದರು ಆದರೆ ಅವರ ಬೇಡಿಕೆಗಳನ್ನು ಈಡೇರಿಸಿದೆ ಪ್ರಾಧಿಕಾರವನ್ನು ರಚನೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಕ.ರ.ವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಪಿ. ಕೃಷ್ಣೇಗೌಡರವರ ಆದೇಶದ ಮೇರೆಗೆ ೨೭ ಜಿಲ್ಲೆಗಳಲ್ಲಿ ಹೋರಾಟವನ್ನು ಹಮ್ಮಿಕೊಂಡಿದೆ. ಈ ಕೂಡಲೇ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕ ನೀಡಿರುವ ೫೦ ಕೋಟಿ ಹಣವನ್ನು ಪ್ರವಾಹ ಪೀಡಿತರಿಗೆ ಮತ್ತು ಉತ್ತರ ಕರ್ನಾಟಕದ ನೊಂದ ರೈತರಿಗೆ ನೀಡುವ ಮೂಲಕ ರಾಜ್ಯದ ಹಿತವನ್ನು ಕಾಪಾಡಬೇಕೆಂದು ಮನವಿ ಮಾಡಿದರು. ಮರಾಠಿಗರ ಪ್ರಾಧಿಕಾರವನ್ನು ರಚನೆ ಮಾಡಿದ್ದೇ ಆದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಕರವೇ ಸ್ವಾಭಿಮಾನಿ ಹಣ ಹಮ್ಮಿಕೊಂಡಿರುತ್ತದೆ ಮತ್ತು ಮರಾಠ ಪ್ರಾಧಿಕಾರ ರಚನೆ ಮಾಡಿದ್ದೇ ಆದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ನೆಲೆಸಿರುವ ಅನ್ಯಭಾಷಿಗರಿಗೂ ಕೂಡ ಪ್ರಾಧಿಕಾರಗಳನ್ನು ರಚನೆ ಮಾಡಬಹುದು ಎಂಬ ಆತಂಕ ಕನ್ನಡಿಗರಲ್ಲಿ ಕಾಡುತ್ತಿದೆ ಹೀಗೆ ಮುಂದುವರೆದರೆ ಮುಂದೊಂದು ದಿನ ಕನ್ನಡಿಗರು ಭಯಭೀತರಾಗಿ ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಮರಾಠಿಗರ ಬೇಡಿಕೆಗಳನ್ನು ಸರ್ಕಾರ ಪರಿಶೀಲನೆ ಮಾಡಿ ನಂತರ ಅವರ ಬೇಡಿಕೆಗಳನ್ನು ಈಡೇರಿಸಲಿ ಆದರೆ ಮರಾಠಿಗರ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಬಾರದೆಂದು ಒತ್ತಾಯಿಸಿದರು.
ಈ ಹೋರಾಟಕ್ಕೆ ನೇತೃತ್ವ ವಹಿಸಿದ ರಾಜ್ಯ ಸಂಚಾಲಕರು, ಜಿಲ್ಲಾಧ್ಯಕ್ಷರಾದ ಸುವರ್ಣಮ್ಮ ಹಾಗು ಜಿಲ್ಲಾ ಪದಾಧಿಕಾರಿಗಳಾದ ಶಿವಯ್ಯ, ಶಿವಕುಮಾರ್, ಎಂ ಗೌಸ್, ಹರಿಹರ ಮಾರುತಿ, ರವಿಕುಮಾರ್, ರಘು, ಪ್ರಭು, ಮಧು, ಅಂಭಿಕ, ಸುಮಾ, ಚೌಡಮ್ಮ ಜಗಳೂರು, ದಾಕ್ಷಾಯಿಣಮ್ಮ, ಗೀತಮ್ಮ, ಸುಮತಿ, ಪ್ರತಿಭಾ, ಅನಿತಾ, ನೀಲಮ್ಮ, ಸಿದ್ದಮ್ಮ, ಶಿವಲೀಲಾ, ಗಂಗಮ್ಮ, ಇಂದ್ರಮ್ಮ, ಮಂಜಮ್ಮ, ರಂಗಮ್ಮ, ಚಂದ್ರ, ಶಬೀರಮ್ಮ, ಸಾವಿತ್ರಮ್ಮ, ರೇಖಾ, ಅನುಸೂಯಮ್ಮ ಹಾಗು ಇನ್ನಿತರು ಭಾಗವಹಿಸಿದ್ದರು.