ಮರಾಠ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯಲು ಕರವೇ ಒತ್ತಾಯ

ರಾಯಚೂರು. ನ.20-ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಸ್ಥಾನಿಕ ಕಚೇರಿ ಅಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮರಾಠಿ ಅಭಿವೃದ್ಧಿ ಪ್ರಾಧಿಕಾರ ಸೃಷ್ಟಿಸಿ 50 ಕೋಟಿ ಮೀಸಲಿಟ್ಟು,ಕನ್ನಡ ಪ್ರಾಧಿಕಾರಕ್ಕೆ ಕೇವಲ 5 ಕೋಟಿ ಮೀಸಲಿಟ್ಟಿರುವುದು ಕನ್ನಡಿಗರಿಗೆ ವಂಚನೆ ಮಾಡಿದಂತಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ರೈತರು ನೆರೆಹಾವಳಿಗೆ ತುತ್ತಾಗಿರುವ ಈ ಸಂದರ್ಭದಲ್ಲಿ ಪರಿಹಾರ ಕೊಡುವ ಬದಲು 50ಕೋಟಿ ಮರಾಠಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೊಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ, ರಾಜ್ಯ ಸರ್ಕಾರ ಓಟಿಗಾಗಿ ಜಾತಿ ರಾಜಕಾರಣ ಮಾಡುತ್ತಿರುವ ಯಡಿಯೂರಪ್ಪನವರೇ ನಾಳೆದಿನ ತಮಿಳರ ಪ್ರಾಧಿಕಾರ ತೆಲುಗಿನ ಪ್ರಾಧಿಕಾರ ಮತ್ಯಾರು ಅಧಿಕಾರಿಗಳು ಮಾಡುತ್ತಾರೆ. ಆದಕಾರಣ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಕೂಡಲೇ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೀರೇಶ್ ಹೀರಾ, ವೆಂಕಟೇಶ ರೆಡ್ಡಿ, ತುಲಜರಾಮ್, ಶ್ಯಾಮ್ ಮಹೇಂದ್ರಕರ್ ,ರುದ್ರಗೌಡ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.