ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ಧತಿಗೆ ಆಗ್ರಹಿಸಿ ಮನವಿ

ಲಕ್ಷ್ಮೇಶ್ವರ,ನ18: ಚುನಾವಣೆಯಲ್ಲಿ ಜಯ ಗಳಿಸುವ ಉದ್ಧೇಶದಿಂದ ರಾಜ್ಯ ಸರ್ಕಾರ ತರಾತುರಿಯಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ಕನ್ನಡ ರಕ್ಷಣಾ ವೇದಿಕೆಯ ಸ್ವಾಭಿಮಾನ ಬಣ ಖಂಡಿಸಿದೆ.
ಈ ಕುರಿತು ಮಂಗಳವಾರ ಇಲ್ಲಿನ ಉಪತಹಶೀಲ್ದಾರ ಮಂಜುನಾಥ ದಾಸಪ್ಪನವರ ಅವರಿಗೆ ಮನವಿ ಸಲ್ಲಿಸಿದ ಬಣದ ಕಾರ್ಯಕರ್ತರು ಬಸವ ಕಲ್ಯಾಣ ಉಪಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂಬ ಕಾರಣಕ್ಕಾಗಿ ಮರಾಠಿಗರ ಓಲೈಕೆಗಾಗಿ ಸರ್ಕಾರ ಪ್ರಾಧಿಕಾರ ರಚಿಸಿದೆ. ಆದರೆ ಇದು ಸರಿಯಾದ ಕ್ರಮವಲ್ಲ. ಮುಂದಿನ ದಿನಗಳಲ್ಲಿ ತಮಿಳು, ತೆಲುಗು, ಮಾರವಾಡಿ, ಗುಜರಾತಿಗಳು ತಮ್ಮ ತಮ್ಮ ಬಾಷೆಯ ಪ್ರಾಧಿಕಾರ ರಚಿಸಲು ಸರ್ಕಾರದ ಮೇಲೆ ಒತ್ತಡ ತರಬಹುದು. ಕಾರಣ ಕೂಡಲೇ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದು ಪಡಿಸಬೇಕು’ ಎಂದು ಕಾರ್ಯಕರ್ತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಣದ ಲಕ್ಷ್ಮೇಶ್ವರ ತಾಲ್ಲೂಕು ಘಟಕದ ಅಧ್ಯಕ್ಷ ಮಾಲತೇಶ ರಗಟಿ, ಸಿ.ಎಫ್. ಗಡ್ಡದೇವರಮಠ, ಬಸವರಾಜ ದುರ್ಗಣ್ಣವರ, ಸಿದ್ದಪ್ಪ ಹೊಸಮನಿ, ಶೌಕತ್ ಫೀರ್‍ಜಾಧೆ, ದೇವರಾಜ ತಂಬ್ರಳ್ಳಿ, ಇಮ್ತಿಯಾಜ್ ಮಂಜಲಾಪುರ, ಬಸವರಾಜ ಗೊಜಗೊಜಿ, ವಿನಾಯಕ ವಾರದ, ಇಬ್ರಾಹೀಂ ಮಂಜಲಾಪುರ, ಮನೋಜ ರಗಟಿ, ಬಸನಗೌಡ ಹೊಸಗೌಡ್ರ, ಮಂಜು ಮಾದರ, ಫಕ್ಕೀರೇಶ ಶಿವಬಸಣ್ಣವರ ಇದ್ದರು.