ಮರಾಠ ಅಭಿವೃದ್ಧಿ ನಿಗಮಕ್ಕೆ ವಿರೋಧ

ಮರಿಯಮ್ಮನಹಳ್ಳಿ, ನ.21: ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವ ಮರಾಠ ಸಮುದಾಯದ ಅಭಿವೃದ್ಧಿ ನಿಗಮ ಪ್ರಾಧಿಕಾರ ಸ್ಥಾಪನೆಗೆ ಪಟ್ಟಣದ ಕರವೇ ಹೋಬಳಿ ಘಟಕದ ಅಧ್ಯಕ್ಷ ಈಡಿಗರ ರಮೇಶ್ ವಿರೋಧ ವ್ಯಕ್ತಪಡಿಸಿದ್ದಾರೆ.
ಅವರು ಮರಿಯಮ್ಮನಹಳ್ಳಿ ಹೋಬಳಿಯ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡ ಬಣದ) ಘಟಕದ ಪದಾಧಿಕಾರಿಗಳ ಸಮೇತ ನಾಡ ಕಾರ್ಯಾಲಯದ ಮುಂಭಾಗದಲ್ಲಿ ವಿರೋಧ ವ್ಯಕ್ತಪಡಿಸಿ ಪಟ್ಟಣದ ಉಪತಹಶೀಲ್ದಾರ್ ಲಾವಣ್ಯ ಅವರಿಗೆ ಮನವಿ ಸಲ್ಲಿಸಿದರು.
ಹೋಬಳಿ ಅಧ್ಯಕ್ಷ ಈಡಿಗರ ರಮೇಶ್ ಮಾತನಾಡಿ, ಕನ್ನಡ ನಾಡಿನ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಕನ್ನಡಿಗರಿಗೆ ಪ್ರಥಮ ಆದ್ಯತೆ ನೀಡಿ ಕನ್ನಡಿಗರ ಅಭಿವೃದ್ಧಿ ಕೆಲಸ ಮಾಡುವುದು ಬಿಟ್ಟು, ಗಡಿ ಭಾಗದಲ್ಲಿ ಪದೇ ಪದೇ ಗಲಭೆಯನ್ನುಂಟು ಮಾಡುವ ಮೂಲಕ ಕನ್ನಡ ನಾಡಿನಲ್ಲಿ ರಾಜೋತ್ಸವವನ್ನು ಆಚರಣೆಗೆ ತೊಂದರೆಯನ್ನುಂಟು ಮಾಡುವ ಮರಾಠಿಗರಿಗೆ ಯಾವ ಪುರುಷಾರ್ಥಕ್ಕಾಗಿ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ಮಾಡುತ್ತಿದ್ದಾರೆ. ಸರ್ಕಾರದ ಈ ನಡೆ ಕನ್ನಡಿಗರಿಗೆ ವಿರೋಧವಾಗಿದ್ದು, ಕನ್ನಡಿಗರಿಗೆ ದ್ರೋಹ ಮಾಡಿ, ಕನ್ನಡಿಗರಿಗೆ ಉದ್ಯೋಗ ಭರವಸೆ ಹಾಗೂ ಇನ್ನಿತರ ಅಭಿವೃದ್ಧಿಗೆ ನೆರವು ನೀಡುವ ಕೆಲಸ ಮಾಡುವುದನ್ನು ಬಿಟ್ಟು ಮರಾಠಿಗರನ್ನು ಅಭಿವೃದ್ಧಿ ಮಾಡಲು ಸರ್ಕಾರದ ನಡೆ ಎಷ್ಟರ ಮಟ್ಟಿಗೆ ಸರಿ. ಈ ಕೂಡಲೇ ಪ್ರಾಧಿಕಾರ ರದ್ದು ಮಾಡಿ, ಇಲ್ಲವಾದಲ್ಲಿ ಜಿಲ್ಲೆ ಮತ್ತು ರಾಜ್ಯಾದಾದ್ಯಂತ ಕರ್ನಾಟಕ ರಕ್ಷಣಾವೇದಿಕೆ (ನಾರಾಯಣ ಗೌಡಬಣ) ವತಿಯಿಂದ ಸರ್ಕಾರದ ವಿರುದ್ಧ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರವೇ ಬಣದ ಕೆ.ಸಚ್ಚಿದಾನಂದ ಶೆಟ್ಟಿ, ಕರವೇ ಗೌರವ ಅಧ್ಯಕ್ಷ ಡಿ.ಭೀಮಣ್ಣ, ನಗರ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ, ಮಾರೇಶ್ ಗರಗ, ಗಾಳೇಶ್, ಬಿ.ಪಾರ್ವತಮ್ಮ, ಬಡಿಗೇರ ದೇವಮ್ಮ, ರಮೇಶ್ ಗರಗ, ಲೋಕೇಶ್ ನಾಯ್ಕ, ಸಮೀರ್ ಹಾಗೂ ಇತರರು ಇದ್ದರು.