ಮರಾಠ ಅಭಿವೃದ್ದಿ ಪ್ರಾಧಿಕಾರಕ್ಕೆ ಸುರೇಶ ಅವಟೆ ವಿರೋಧ

ಅಫಜಲಪುರ:ನ.18: ಕರ್ನಾಟಕ ರಾಜ್ಯ ಸರಕಾರ ಮರಾಠ ಅಭಿವೃದ್ದಿ ಪ್ರಾಧಿಕಾರ ರಚನಗೆ ಮತ್ತು ಅದಕ್ಕಾಗಿ ರೂಪಾಯಿ 50 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದನ್ನು ಜೈ ಕರವೇ ಅಧ್ಯಕ್ಷ ಸುರೇಶ ಅವಟೆ ಖಂಡಿಸಿದ್ದಾರೆ. ಮರಾಠ ಅಭಿವೃದ್ದಿ ಪ್ರಾಧಿಕಾರಕ್ಕೆ 50 ಕೋಟಿ ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ 5 ಕೋಟಿ ಅನುದಾನವನ್ನು ರಾಜ್ಯ ಸರಕಾರ ಪ್ರಕಟಿಸಿದೆ. ಇದು ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಮಾಡಿರುವ ದ್ರೋಹ. ತಮ್ಮ ರಾಜಕೀಯ ಲಾಭಕೋಸ್ಕರ ಕನ್ನಡ ಭಾಷೆಯನ್ನು ಬಿಟ್ಟು ಬೇರೆ ಯಾವುದೇ ಭಾಷಿಕರನ್ನು ಓಲೈಸಲು ಸರಕಾರ ಮುಂದಾದರೆ ಕನ್ನಡಿಗರು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಸುತ್ತೇವೆ.

ಇದನ್ನು ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ತಮಿಳು, ತೇಲಗು, ಮಲಯಾಳಂ ಹಾಗೂ ಗುಜರಾತಿ ಭಾಷಾ ಅಭಿವೃದ್ದಿ ಪ್ರಾಧಿಕಾರಗಳು ರಚಿಸುತ್ತಾರೆ. ಕನ್ನಡ ಶಾಲೆಗಳನ್ನು ಮುಚ್ಚುತ್ತ ಆಂಗ್ಲ ಮಾದ್ಯಮದ ಪಬ್ಲೀಕ್ ಶಾಲೆಗಳನ್ನು ತೆರೆಯುತ್ತೀರುವುದನ್ನು ಮತ್ತು ಬೇರೆ ಭಾಷಿಕರ ಅಭಿವೃದ್ದಿ ಪ್ರಾಧಿಕಾರಗಳನ್ನು ರಚಿಸುತ್ತೀರುವುದನ್ನು ನೋಡಿದರೆ ಮತ್ತೋಮ್ಮೆ ಗೋಕಾಕ ಚಳುವಳಿ ರೀತಿ ಚಳುವಳಿ ಮಾಡುವ ಅನಿವಾರ್ಯತೆ ಬರುತ್ತದೆ.

ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಯಾವುದೇ ಅಭಿವೃದ್ದಿ ಪ್ರಾಧಿಕಾರಗಳು ಇಲ್ಲದಿರುವಾಗ ನಮ್ಮಲ್ಲಿ ಏಕೆ ಮರಾಠಿ ಅಭಿವೃದ್ದಿ ಪ್ರಾಧಿಕಾರ. ಇಲ್ಲಿರುವ ಮರಾಠಿಗರಿಗೆ ಅವಶ್ಯಕ ಮುಲಭೂತ ಸೌಕರ್ಯಗಳು ಇರುವಾಗ ಮತ್ಯಾಕೆ ಪ್ರತ್ಯೇಕ ಅಭಿವೃದ್ದಿ ಪ್ರಾಧಿಕಾರ. ಬೆಳಗಾವಿ ಪ್ರದೇಶದಲ್ಲಿನ ಮರಾಠಿಗರು ಕನ್ನಡ ರಾಜ್ಯೋತ್ಸವದಂದು ಕರಾಳ ದಿನವಾಗಿ ಆಚರಿಸುವಾಗ ಅವರನ್ನು ಹೇಗೆ ನಮ್ಮವರು ಎಂದು ಸ್ವೀಕರಿಸೋಣ. ಎಲ್ಲಾ ಭಾಷಿಕರನ್ನು ಸಹೋದರರಂತೆ ಕಂಡು ಅವರಿಗೆ ಆಶ್ರಯ ನೀಡುವರು ಕನ್ನಡಿಗರು, ಆದರೆ ನಲೆಯುರಿದ ಮೇಲೆ ತೀರುಗಿ ಬಿದ್ದು ನಾನೇಕೆ ಕನ್ನಡ ಮಾತಾಡಲಿ ಮತ್ತು ಕನ್ನಡಕ್ಕೆ ದಿಕ್ಕಾರ ಏನ್ನುವವರನ್ನು ಹೇಗೆ ಸಹಿಸಿಕೋಳ್ಳಬೇಕು. ಈಗ ನಾವು ಮರಾಠ ಸಮುದಾಯದವರಿದ್ದರು ನಾವೂ ಕನ್ನಡಿಗರು ಎಂದು ಹೇಳಿಕೊಂಡು ಸಮರ್ಥನೆಗೆ ಬರುತ್ತೀರುವವರು ಅಂದು ಬೆಳಗಾವಿಯಲ್ಲಿ ಮರಾಠಿಗರು ಕನ್ನಡ ರಾಜ್ಯೋತ್ಸವದಂದು ಕರಾಳ ದಿನಾಚರಣೆ ಮಾಡುವಾಗ ಅದನ್ನು ಏಕೆ ವಿರೋಧಿಸಲಿಲ್ಲ. ಇಂದು ಸಮರ್ಥನೆ ಮಾಡಿಕೋಳ್ಳಲು ಬರುತ್ತೀರು ಮರಾಠ ಸಮುದಾಯದವರು ಕನ್ನಡ ರಾಜ್ಯೋತ್ಸವದಂದು ಕರಾಳ ದಿನಾಚರಣೆ ಮಾಡುವುದನ್ನು, ಕನ್ನಡಿಗರ ಮೇಲೆ ಹಲ್ಲೆಗಳು ನಡೆದಾಗ, ಕರ್ನಾಟಕದ ಬಸ್ಸುಗಳನ್ನು ಸುಟ್ಟಾಗ ವಿರೋಧಿಸಿದ್ದರೆ ಇಂದು ನಾವು ಮರಾಠ ಅಭಿವೃದ್ದಿ ಪ್ರಾಧಿಕಾರಕ್ಕೆ ವಿರೋಧಿಸುತ್ತೀರಲಿಲ್ಲ. ಕರಾಳ ದಿನಾಚರಣೆ ಮಾಡುವಾಗ ಮೌನವಾಗಿ ಕುಳಿತು ಸಮ್ಮತಿಸಿ ಇಂದು ಸಮರ್ಥನೆ ಮಾಡಿಕೊಳ್ಳುವ ಮೊದಲು ಆತ್ಮಾವಲೋಕನ ಮಾಡಿಕೋಳ್ಳಬೇಕು.

ಆದ್ದರಿಂದ ಸರಕಾರ ತಕ್ಷಣ ಈ ಮರಾಠಾ ಅಭಿವೃದ್ದಿ ಪ್ರಾಧಿಕಾರ ರಚನೆಯನ್ನು ಹಿಂದಕ್ಕೆ ಪಡೆಯಬೇಕು. ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ 500 ಕೋಟಿ ರೂಪಾಯಿಗಳನ್ನು ಮೀಸಲೀಡಬೇಕು. ಮುಂದೆ ಇಂತಹ ಯಾವುದೇ ಬೇರೆ ಭಾಷಿಕರ ಅಭಿವೃದ್ದಿ ಪ್ರಾಧಿಕಾರ ರಚನೆಗೆ ಕೈಹಾಕಬಾರದು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ.

ಈ ಸಂದರ್ಭದಲ್ಲಿ ಮಹಾಂತೇಷ ಗುಣಾರಿ, ಸದ್ದಾಂ ನಾಕೇದಾರ, ಮಹಿಬೂಬ ಮುಲ್ಲಾ, ಶಿವಾನಂದ ಸಲಗರ, ಯಲ್ಲಪ್ಪ ಗ್ಯಾನಾಗೋಳ, ಚಂದ್ರಕಾಂತ ಘತ್ತರಗಿ, ಮೋಬಿನ್ ಕಿಣ್ಣಿ, ವಿಠಲ್ ಮ್ಯಾಕೇರಿ, ಮಲ್ಲು ಸುತಾರ, ಸೇರಿದಂತೆ ಇತರರು ಇದ್ದರು.