ಮರಾಠಿ ಅಭಿವೃದ್ಧಿ ಪ್ರಾಧಿಕಾರ ರದ್ದಿಗೆ ಆಗ್ರಹ

ರಾಯಚೂರು,ನ.19- ಮರಾಠಿ ಅಭಿವೃದ್ಧಿ ಪ್ರಾಧಿಕಾರ ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನೆ ಸಲ್ಲಿಸಿದ ಅವರು ಉತ್ತರ ಕರ್ನಾಟಕ ಪ್ರದೇಶವು ಮಳೆ ಪ್ರವಾಹದಿಂದ ಕೊಚ್ಚಿ ಹೋಗಿದ್ದು ಪ್ರವಾಹ ಪೀಡಿತರಿಗೆ ಮತ್ತು ರೈತರಿಗೆ ಸರ್ಕಾರ ನೆರವು ನೀಡಿದೆ ಮರಾಠಿಗರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಮರಾಠಿಗಳ ಮತಗಳನ್ನು ಪಡೆಯಲು ಮುಂದಾಗಿದೆ.
ಕೂಡಲೇ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ 50 ಕೋಟಿ ಹಣವನ್ನು ಉತ್ತರ ಕರ್ನಾಟಕದ ನೊಂದ ರೈತರಿಗೆ ಮತ್ತು ಪ್ರವಾಹ ಪೀಡಿತರಿಗೆ ನೀಡಿ ರಾಜ್ಯದ ಹಿತ ಕಾಪಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ .
ಕೂಡಲೇ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಆಗ್ರಹ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಖಲೀಲ್ ಪಾಶ, ರಾಚಯ್ಯ ಸ್ವಾಮಿ, ಕಾಸಿಂಸಾಬ್, ಬಂದೇನವಾಜ್ ಅಲ್ಲನಪುಡಿ, ಸೈಯದ್ ಫಾರೂಕ್, ತಾಹಿರ್ ಪಾಷಾ, ಮನಾನ್, ಪಾಂಡುರಂಗ, ಉಸ್ಮಾನ್, ಆನಂದ, ಸಾಧಿಕ್, ಹೈಮದ್ ಬೇಗ್ ಸೇರಿದಂತೆ ಇನ್ನಿತರರಿದ್ದರು.