ಮರಾಠಾ ಸಮಾಜದ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತಿ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.21:ಐತಿಹಾಸಿಕ ವಿಜಯಪುರ ನಗರದಲ್ಲಿ ಮರಾಠಾ ಸಮಾಜದ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 394 ನೇ ಜಯಂತಿ ಉತ್ಸವದ ಸೋಮವಾರ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ಸೋಮವಾರ ಬೆಳಿಗ್ಗೆ 8-30 ಗಂಟೆಗೆ ಮಾರಾಠ ಸಮಾಜ ವತಿಯಿಂದ ಡೋಬಳೆ ಗಲ್ಲಿಯ ಶಿವಾಜಿ ಪೇಠದ ಶ್ರೀ ಈಶ್ವರ ಮಂದಿರ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದ ಪೂಜೆಯನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪುತ್ತ ರಾಮನಗೌಡ ಪಾಟೀಲ ಯತ್ನಾಳ ನೆರವೇರಿಸಿದರು. ಧ್ವಜಾರೋಹಣವನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೆರವೇರಿಸಿದರು. ನಂತರ ಭಗತಸಿಂಗ ಚೌಕನಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಬಂಜಾರ ಧರ್ಮ ಗುರುಗಳು ಗೋಪಾಲ ಮಾಹಾರಾಜರು ಹಾಗೂ ಮಹಾನಗರ ಪಾಲೀಕೆಯ ಸದಸ್ಯ ಪ್ರೇಮಾನಂದ ಬಿರಾದಾರ ಪೂಜೆಯನ್ನು ನೆರವೇರಿಸಿದರು. ಬಳಿಕ ಶಿರಾಳಶೆಟ್ಟಿ ಚೌಕನಲ್ಲಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಹಾನಗರ ಪಾಲಿಕೆ ಸದಸ್ಯ ಅಶೋಕ ನ್ಯಾಮಗೊಂಡ ಪೂಜೆ ನೆರವೇರಿಸಿದರು. ಅದೇ ಮಾರ್ಗವಾಗಿ ಶಿವಾಜಿ ಶಾಲೆಯಲ್ಲಿರುವ ಶಿವಾಜಿ ಮೂರ್ತಿಗೆ ಉದ್ಯಮಿ ಪ್ರೇಮ ಭಾಟಿ ಪೂಜೆ ನೆರವೇರಿಸಿದರು.
ಸಮಾಜದ ಸುಮಂಗಲೆಯರಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರಿಂದ ತೊಟ್ಟಿಲು ಕಾರ್ಯಕ್ರಮ ನಡೆಸಲಾಯಿತು.
ಅನಂತರ ಛತ್ರಪತಿ ಶಿವಾಜಿ ಸರ್ಕಲ್‍ನಲ್ಲಿರುವ ಭವ್ಯ ಪುತ್ಥಳಿಗೆ ಶಿವಜಯಂತಿ ಉತ್ಸವ ಸಮಿತಿ ಅಧ್ಯಕ್ಷ ವಿಶಾಲ ಪವಾರ ಮತ್ತು ಶಿವಾಜಿ ಕನಸೆ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ವಿಜಯ ಚವ್ಹಾಣ, ಮಹಾನಗರ ಪಾಲಿಕೆ ಸದಸ್ಯ ರಾಹುಲ್ ಜಾಧವ, ದಲಿತ ಮುಖಂಡರಾದ ಅಡವೆಪ್ಪ ಸಾಲಗಲ್, ಪ್ರಭಾಕರ ಭೋಸಲೆ, ತಾನಾಜಿ ಜಾಧವ, ಸದಾಶಿವ ಪವಾರ, ಖಂಡು ಚವ್ಹಾಣ, ಕಿಶೋರ ಧೊಖಡೆ, ವಿಜಯ ಪವಾರ, ಕಿರಣ ಮೋರೆ, ಅಕ್ಷಯ ಚಿತ್ರಗಾರ, ನರಸಿಂಗ ಪಸ್ಕೆ, ವೈಭರ ಪಾಟ್ನೆ, ವಿಜಯ ಘಾಟಗೆ, ಭೀಮಾಶಂಕರ ಶಿವಾಳಕರ, ಲಕ್ಷ್ಮಣ ಜಾಧವ, ಕೇತನ ಚವ್ಹಾಣ, ರಾಜು ಜಾಧವ, ಅದಿತ್ಯ ಜಮಾದಾರ ಮತ್ತು ಎಲ್ಲಾ ಸಮಾಜದ ಮುಖಂಡರು ಮತ್ತು ಶಿವಪ್ರೇಮಿ ಅಭಿಮಾನಿಗಳು ಉಪಸ್ಥಿತರಿದ್ದರು.