ಮರಾಠಾ ಸಮಾಜಕ್ಕೆ ನ್ಯಾಯ ಒದಗಿಸಲು ಚುನಾವಣೆಗೆ ಸ್ಪರ್ಧೆ: ಡಾ. ದಿನಕರ ಮೋರೆ

ಬೀದರ:ಏ.16: ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬೃಹತ್ ಮರಾಠಾ ಸಮುದಾಯಕ್ಕೆ ಟಿಕೇಟ್ ನೀಡುವಲ್ಲಿ ರಾಷ್ಟಿçÃಯ ಪಕ್ಷಗಳು ಎಡವಿದ ಪ್ರಯುಕ್ತ ಸಮುದಾಯಕ್ಕೆ ಹಾಗೂ ಸಮುದಾಯದ ಜನರಿಗೆ ನ್ಯಾಯ ಒದಗಿಸಲು ಲೋಕಸಭಾ ಚುನಾವಣೆಗೆ ಬೀದರ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಲಾಗಿದೆ ಎಂದು ಲೋಕಸಭಾ ಚುನಾವಣೆಯ ಸ್ವತಂತ್ರ ಅಭ್ಯರ್ಥಿ ಡಾ. ದಿನಕರ ಮೋರೆ ತಿಳಿಸಿದರು.
ಬೀದರ ಸ್ವಾಭಿಮಾನಿ ಆಘಾಡಿ ವತಿಯಿಂದ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರ ಮೊದಲಿನಿಂದಲೂ ಇತ್ತು. ಪ್ರಯತ್ನ ಮಾಡುತ್ತಲೇ ಬಂದಿದ್ದೇನೆ. ಮರಾಠಾ ಸಮುದಾಯ ಹಾಗೂ ಎಲ್ಲಾ ಹಿತೈಷಿಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿ, ಹಿರಿಯರ ಹಾಗೂ ಗಣ್ಯರ ಪ್ರೇರಣೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಏಪ್ರಿಲ್ ೧೯ ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಹೊಂದಿದ್ದೇನೆ ಎಂಬುದನ್ನು ಸಾಬೀತು ಮಾಡಿ ತೋರಿಸುತ್ತೇನೆ ಎಂದು ಡಾ. ದಿನಕರ ಮೋರೆ ಪ್ರತಿಪಾದಿಸಿದರು.
ಮರಾಠಾ ಸಮುದಾಯದ ಮುಖಂಡರಾದ ಪದ್ಮಾಕರ ಪಾಟೀಲ ಮಾತನಾಡಿ ಮರಾಠಾ ಹಾಗೂ ಸಮಾಜದ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಡಾ. ದಿನಕರ ಮಾಧವರಾವ ಮೋರೆ ಅವರನ್ನು ಸರ್ವಾನುಮತದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಲಾಗಿದೆ. ರಾಷ್ಟಿçÃಯ ಪಕ್ಷಗಳಾದ ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೇಸ್ ಪಕ್ಷಗಳು ಸದ್ಯಕ್ಕೆ ಅಷ್ಟೊಂದು ಜನಪ್ರಿಯತೆ ಹಾಗೂ ಜನರ ದೃಷ್ಟಿಯಲ್ಲಿ ವಿನಯತೆ ಹೊಂದಿಲ್ಲ. ಹೀಗಾಗಿ ನಾಮಪತ್ರ ಹಿಂಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾವು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದರಲ್ಲದೆ ಮರಾಠಾ ಸಮಾಜದ ವತಿಯಿಂದ ಒಟ್ಟು ನಾಲ್ಕು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಪರಮೇಶ್ವರ ಕಿಶನರಾವ ಪಾಟೀಲ, ರಾಮರಾವ ರಾವಣಗಾಂವೆ, ನರೇಶ ಭೋಸ್ಲೆ ಹಾಗೂ ಡಾ. ದಿನಕರ ಮೋರೆ ಏಪ್ರಿಲ್ ೧೯ ರಂದು ಸಲ್ಲಿಸಲಿದ್ದಾರೆ. ಕೊನೆಗೆ ಮೂವರು ನಾಮಪತ್ರ ವಾಪಸ್ ಪಡೆಯಲಿದ್ದು, ಡಾ. ದಿನಕರ ಮೋರೆ ಅಂತೀಮವಾಗಿ ಸ್ಪರ್ಧೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕವೇ ನಾನು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ನನ್ನ ಜೊತೆ ಸುಮಾರು ೨೦ ರಿಂದ ೨೫ ಜನ ಮುಖಂಡರು ರಾಜೀನಾಮೆ ಸಲ್ಲಿಸಲಿದ್ದು, ರಾಷ್ಟಿçÃಯ ಪಕ್ಷಗಳ ಅಹಂಕಾರ ಮುರಿದು ಮರಾಠಾ ಸಮಾಜಕ್ಕೆ ನ್ಯಾಯ ಒದಗಿಸುವುದು ನಮ್ಮ ಮೂಲ ಧ್ಯೇಯವಾಗಿದೆ ಎಂದು ಪದ್ಮಾಕರ ಪಾಟೀಲ ತಿಳಿಸಿದರು.
ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಡಾ. ಬಾಲಾಜಿ ಸಾವಳೆಕರ್, ಜನಾರ್ಧನ ಬಿರಾದಾರ, ರಾಮರಾವ ರಾವಣಗಾಂವೆ, ರಾವುಸಾಹೇಬ ಬಿರಾದಾರ, ಯುವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.