ಮರಳು ಶಿಲ್ಪ ರಚಿಸಿ ಮುರ್ಮುರಿಗೆ ಅಭಿನಂದನೆ

ಪುರಿ,ಜು, ೨೨-ಒಡಿಶಾದ ಆದಿವಾಸಿ ಮಹಿಳೆ ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾಗುತ್ತಿದ್ದಂತೆ ಪುರಿ ಕಡಲತೀರದಲ್ಲಿ ದ್ರೌಪದಿ ಮುರ್ಮು ಅವರ ಮರಳು ಶಿಲ್ಪ ರಚಿಸುವ ಮೂಲಕ ಕಲಾವಿದ ಸುದರ್ಶನ್ ಪಟ್ನಾಯಕ್ ವಿಭಿನ್ನ ರೀತಿಯಲ್ಲಿ ಅಭಿನಂಧನೆ ಸಲ್ಲಿಸಿದ್ದಾರೆ.
ಕಡಲ ತೀರದಲ್ಲಿ ರಚಿಸಿರುವ ಈಗಿನ ಕಲಾಕೃತಿಗೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ
ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ದೇಶದ ೧೫ನೇ ರಾಷ್ಟ್ರಪತಿ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ಮುರ್ಮು ೬,೭೬,೮೦೩ ಮೌಲ್ಯದೊಂದಿಗೆ ೨,೮೨೪ ಮತಗಳನ್ನು ಪಡೆದರೆ, ಅವರ ಎದುರಾಳಿ ಯಶವಂತ್ ಸಿನ್ಹಾ ೩,೮೦,೧೭೭ ಮೌಲ್ಯದೊಂದಿಗೆ ೧,೮೭೭ ಮತಗಳನ್ನು ಪಡೆದರು.ಜುಲೈ ೧೮ ರಂದು ನಡೆದ ಮತದಾನದಲ್ಲಿ ಒಟ್ಟು ೪,೮೦೯ ಸಂಸದರು ಮತ್ತು ಶಾಸಕರು ಮತ ಚಲಾಯಿಸಿದ್ದರು.
ದೇಶದ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿಯಾಗಿರುವ ಮುರ್ಮು ಅವರ ಗೆಲುವಿನ ಶುಭಾಷಯಗಳ ವಿನಿಮಯ ಹರಿದು ಬಂದಿದೆ.ದ್ರೌಪದಿ ಮುರ್ಮು ಅವರ ಜನ್ಮಸ್ಥಳವಾದ ಒಡಿಶಾದ ರಾಯರಂಗ್‌ಪುರ್ ಗ್ರಾಮದಲ್ಲಿ ದ್ರೌಪದಿ ಮುರ್ಮು ವಿಜಯದ ನಿರೀಕ್ಷೆ ಮೀರಿ ಸಂಭ್ರಮಾಚರಣೆ ಮೊಳಗಿದವು.
ದ್ರೌಪದಿ ಮುರ್ಮು ಅವರ ಸಹೋದರ ತಾರಿಣಿಸೇನ್ ತುಡು ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮುರ್ಮು ಭಾರತದ ೧೫ ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.