ಮರಳು ಮಾಫಿಯ ವಿರುದ್ಧ ಹೋರಾಟ ಮಾಡಿದವರಿಗೆ ಸನ್ಮಾನ

ದೇವದುರ್ಗ.ಅ.೩೧-ಕೃಷ್ಣಾ ನದಿಯಲ್ಲಿ ನಡೆಯುತ್ತಿರುವ ಮರಳು ಅಕ್ರಮ ಮಾಫಿಯ ವಿರುದ್ಧ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರಾದ ಶರಣರೆಡ್ಡಿ, ಸುರೇಶಗೌಡ ಬ್ಯಾಗಳಮನಿ, ಮಂಜುನಾಥಗೌಡ ದೊಡ್ಡಮನಿ ಅವರಿಗೆ ಸನ್ಮಾನಿಸಲಾಯಿತು.
ಜವರ್ಗಿ ತಾಲೂಕಿನ ಆಂದೋಲಾ ಗ್ರಾಮದ ಕರುನೇಶ್ವರ ಮಠದಲ್ಲಿ ನಡೆದ ಕ್ರಾಂತಿ ದಿವಸ್ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೋರಾಟಗಾರರಿಗೆ ಸನ್ಮಾನಿಸಿದರು. ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮಿಗಳು ಇತರರಿದ್ದರು.