ಮರಳು ಮಾಫಿಯದಿಂದ ಗ್ರಾಮ ಲೆಕ್ಕಿಗರ ಮೇಲೆ ಮಾರಕಾಸ್ತ್ರಗಳಿಂದ ದಾಳಿಗೆ ಖಂಡನೆ

ಸಂಜೆ ವಾಣಿ ವಾರ್ತೆ
ಕೊಟ್ಟೂರು ಡಿ 03: ಬಳ್ಳಾರಿ ತಾಲೂಕಿನ ತೋಳಮಾಮಿಡಿ ಗ್ರಾಮದಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದ್ದ ಟ್ರಾಕ್ಟರನ್ನು ಹಿಡಿದ ಕಾರಣ ತೋಳಮಾಮಿಡಿ ಗ್ರಾಮಸ್ಥರು ಹಾಗೂ ಬಳ್ಳಾರಿ ಮಿಲ್ಲರ್ ಪೇಟೆಯ ಕೆಲ ವ್ಯಕ್ತಿಗಳು ವೆಂಕಟಸ್ವಾಮಿ ಪ್ರಭಾರೆ ಕಂದಾಯ ನಿರೀಕ್ಷಕರ ವಿರುದ್ಧ ಗಲಾಟೆ ಮಾಡಿರುತ್ತಾರೆ. ಈ ಬಗ್ಗೆ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿರುತ್ತದೆ.     
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಂಡು ಪುನ: ಈ ರೀತಿಯ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ  ಮಾನ್ಯ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ, ಕೊಟ್ಟೂರು ತಾಲೂಕು ಘಟಕದ ಅಧ್ಯಕ್ಷರಾದ ಕೊಟ್ರೇಶ.ಬಿ. ಇವರು ಇಂದು ಗ್ರೇಟ್-2 ತಹಶೀಲ್ದಾರರಾದ (ಪ್ರಭಾರೆ) ಶ್ರೀ ನಾಗರಾಜ.ಕೆ ಇವರಿಗೆ ಮನವಿಯನ್ನು ಸಲ್ಲಿಸಿದರು. ಈ ಸಮಯದಲ್ಲಿ ಕಾರ್ಯದರ್ಶಿ ರಮೇಶ್ ಕೆ, ಖಜಾಂಚಿ ಮಲ್ಲೇಶ ಕೆ, ಉಪಾಧ್ಯಕ್ಷರಾದ ಸೌಭಾಗ್ಯ ಕೆ, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕರಾದ ಹಾಲಸ್ವಾಮಿ, ಶಿರಸ್ತೇದಾರರಾದ ಶಿವಕುಮಾರಗೌಡ, ಲೀಲಾ ಎಸ್, ಸಿಬ್ಬಂದಿಯಾದ ಎಸ್ ಎಂ ಗುರುಬಸವರಾಜ, ರವಿ ಹರಪನಹಳ್ಳಿ, ಹನಮಂತ ಪ್ರ.ದ.ಸ ಹಾಗು ಇತರರು ಇದ್ದರು.