ಮರಳು ಗುಡ್ಡೆಯಲ್ಲಿ 2 ವರ್ಷದ ಬಾಲಕನ ಶವ ಪತ್ತೆ : ಕೊಲೆ ಶಂಕೆ

ಕಲಬುರಗಿ :ಡಿ.07: ನಗರದ ಫಿರ್ದೋಸ್ ನಗರ‌ ಬಡಾವಣೆಯ ಸುಣ್ಣದ ಬಟ್ಟಿಯ ಬಳಿಯ ನಿರ್ಮಾಣ ಹಂತದ ಕಟ್ಟಡದ ಬಳಿ ಹಾಕಲಾಗಿದ್ದ ಮರಳಿನಲ್ಲಿ‌ ಎರಡು ವರ್ಷದ ಬಾಲಕನ ಶವ ಪತ್ತೆಯಾಗಿದೆ.

ಮಹ್ಮದ್ ಮುಝಾಮೀಲ್(2) ತಂದೆ ನಿಸಾರ ಅಹ್ಮದ ಅಬೂಬಕರ ಕಾಲನಿ ನಿವಾಸಿ ಮೃತ ದುರ್ದೈವಿ ಬಾಲಕ ಎಂದು ಗುರುತಿಸಲಾಗಿದೆ.
ಇಂದು ಮರಳಿನ ಗುಡ್ಡೆಯಿಂದ ಕಾರ್ಮಿಕರು ಮರಳು ಹೊರ ತೆಗೆಯುತ್ತಿರುವಾಗ ಬಾಲಕನ ಶವ ಕಂಡು ಬೆಚ್ಚಿಬಿದ್ದಿದ್ದಾರೆ.‌
ಮೃತ ಬಾಲಕ ನಿನ್ನೆ ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದ ಎನ್ನಲಾಗುತ್ತಿದೆ.ಇಂದು ಮರಳಿನಡಿ ಶವ ಪತ್ತೆಯಾಗಿರೋದು ನೋಡಿದ್ರೆ, ದುಷ್ಕರ್ಮಿಗಳು ಕೊಲೆ ಮಾಡಿ ಶವ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದು, ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.