ಮರಳು ಕಳ್ಳ ದಂಧೆ ಸಾಗಾಟದಲ್ಲಿ ಅಧಿಕಾರಿ ಶಾಮೀಲು: ಬಿಆರ್ ಆರೋಪ

ಆಳಂದ :ಮೇ.14:ಮೊನ್ನೆ ತಾನೆ ಅಫಜಲ್‍ಪೂರ ಶಾಸಕ ಎಂ.ವೈ.ಪಾಟೀಲರು ಕಳ್ಳು ಮರಳು ಸಾಗಾಣಿಕೆಯ ಬಗ್ಗೆ ಧ್ವನಿ ಎತ್ತಿ ಇದರಲ್ಲಿ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಆಪಾಧಿಸಿರುವದು ನೂರಕ್ಕೆ ನೂರು ಸತ್ಯ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಆರೋಪಿಸಿದ್ದಾರೆ.ಈ ಕುರಿತು ಈಶಾನ್ಯ ವಲಯ ಐಜಿಪಿ. ಅವರಿಗೆ ಪತ್ರ ಬರೆದ ಅವರು ಈ ದಂಧೆ ನಿನ್ನೆ ಮೊನ್ನೆಯದಲ್ಲ, ಕೆಲವು ಹಿತಾಸಕ್ತಿಗಳು ಅಧಿಕಾರಿಗಳೊಂದಿಗೆ ಶಾಮೀಲು ಮಾಡಿಕೊಂಡು ದಂಧೆ ನಡೆಸುತ್ತಿವೆ. ಇಡೀ ಜನತೆ ಕೊರೊನಾ ಸಂಕಷ್ಠದಲ್ಲಿ ತಲ್ಲಣಿಸಿ ಹೋಗಿರುವಾಗ ಅಧಿಕಾರಿಗಳು ಲೂಟಿ ಮಾಡುತ್ತಿರುವದು ಸತ್ಯ. ಭೀಮಾ ನದಿಯಿಂದ ಮರಳು (ಉಸುಕು) ಅಫಜಲ್‍ಪೂರ ತಾಲೂಕಿನ ಅರ್ಜುಣಗಿ ಮುಖಾಂತರ ಹಾಯ್ದು ಆಳಂದ ತಾಲೂಕಿನ ಹಡಲಗಿ ಮಾರ್ಗವಾಗಿ ಆಳಂದ ತಾಲೂಕಿಗೆ ಬಂದು ಮುಖ್ಯ ರಸ್ತೆ ಬಿಟ್ಟು ನಡುವಿನ ದಾರಿಯಿಂದ ವiಹಾರಾಷ್ಟ್ರಕ್ಕೆ ಸಾಗುತ್ತಿದೆ. ಇದರಲ್ಲಿ ಆಳಂದ ಪಿಎಸ್‍ಐ. ಬೇರೆಯವರ ಹೆಸರಿನಲ್ಲಿ 3 ಟಿಪ್ಪರ ಖರೀದಿಸಿ ಕಳ್ಳ ದಂಧೆ ಮಾಡುತ್ತಿರುವದು ಕಂಡು ಬಂದಿದೆ. ಅದರಲ್ಲಿ ತಮ್ಮದೇ ಮರಳು ಖರೀದಿಸಬೇಕೆಂದು ಒತ್ತಾಯಿಸಿ ಮಾರಾಟ ಮಾಡುತ್ತಿದ್ದಾರೆ. ಅಧಿಕಾರಿಗಳೇ ಕಳ್ಳು ದಂಧೆ ಮಾಡುತ್ತಿರುವದು ತಿಳಿದು ಬರುತ್ತದೆ. ಹೀಗಾಗಿ ಆಳಂದ ಉಪ ವಿಭಾಗದ ಡಿವೈಎಸ್ಪಿ ಅವರನ್ನು ಬಿಟ್ಟು ಬೇರೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪಿಎಸ್‍ಐ. ವಿರುದ್ಧ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.