
ಕಲಬುರಗಿ,ಜು 16:ಕಲಬುರಗಿ ಜಿಲ್ಲೆಯ ಮರಳು ಅಕ್ರಮ ವಿಚಾರ ವಿಧಾನ ಸದನದಲ್ಲಿ ಪ್ರತಿಧ್ವನಿಸಿದೆ. ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಈ ಸಂಗತಿಯನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದಾರೆ.
ಸದನದಲ್ಲಿ ಗಮನ ಸೆಳೆಯುವ ಗೊತ್ತುವಳಿ ಮಂಡಿಸಿ ಮರಳು ಅಕ್ರದ ವಿಷಯವಾಗಿ ಮಾತನಾಡಿದ ಶಾಸಕರು ನೆಲೋಗಿಯಲ್ಲಿ ಅಕ್ರಮ ಮರಳಿನ ದಂಧೆ ನಿಲ್ಲಿಸಲು ಹೋಗಿದ್ದ ಪೇದೆಯೊರ್ವನ ಮೇಲೆ ಟ್ರಾಕ್ಟರ್ ಹಾಯಿಸಿ ಕೊಲೆ ಮಾಡಲಾಗಿದೆ. ಇದಾದ ನಂತರ ಜಿಲ್ಲೆಯಲ್ಲಿ ಮರಳು ಸಾಗಾಟ ಬಂದ್ ಮಾಡಲಾಗಿದೆ. ಇದರಿಂದ ಜಿಲ್ಲಾದ್ಯಂತ ಮರಳಿನ ಬೆಲೆ ಟಿಪ್ಪರ್‍ಗೆ 1 ಕ್ಕೆ 40 ಸಾವಿರ ಇದ್ದದ್ದು 1 ಲಕ್ಷ 20 ಸಾವಿರಕ್ಕೆ ಹೆಚ್ಚಾಗಿದೆ. ಇದರಿಂದ ಮನೆ ಕಟ್ಟಲು ಮುಂದಾಗಿರುವ ಬಡವರು, ಮಧ್ಯಮ ವರ್ಗದವರು ತೊಂದರೆಗೆ ಸಿಲುಕಿದ್ದಾರೆಂದು ಶಾಸಕರು ಸದನದ ಗಮನ ಸೆಳೆದರು.
ನದಿ ಉಳಿಯಬೇಕು, ಮರಳು ಕಳವಾಗದೆ ಜನರಿಗೆ ಯೋಗ್ಯ ದರದಲ್ಲಿ ಸಿಗಬೇಕು, ಸರ್ಕಾರದ್ದೆ ರಾಜಧನ ಬರಬೇಕು. ಅಂತಹ ನೀತಿ ರೂಪಿಸಬೇಕಾಗಿದೆ. ಇದು ಇಂದಿನ ಅಗತ್ಯವಾಗಿದೆ ಎಂದು ಶಾಸಕ ಪಾಟೀಲ್ ಪ್ರತಿಪಾದಿಸಿದರು.
ಶಾಸಕರ ಗಮನ ಸೆಳೆಯುವ ಚರ್ಚೆಗೆ ಸ್ಪಂದಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಕಳೆದ 5 ಸರ್ಕಾರಗಳಲ್ಲಿಯೂ ಮರಳು ವಿಚಾರ ಪ್ರಸ್ತಾಪವಾಗಿದೆ. ಹೊರತು ಸೂಕ್ತ ಪರಿಹಾರ ಮಾತ್ರ ಸಿಕ್ಕಿಲ್ಲ. ಹೀಗಾಗಿ ಕಲಬುರಗಿಯಲ್ಲಿನ ಈ ಸಮಸ್ಯೆ ಬಗ್ಗೆ ಶಾಸಕರು ವಿವರಿಸಿದ್ದಾರೆ. ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕÀರು ಸಭೆ ನಡೆಸಲಿ. ಜಿಲ್ಲೆಗೆ ಸೂಕ್ತ ಕಂಡಿರುವ ಮರಳು ನೀತಿ, ಬಿಗಿ ಕ್ರಮಕ್ಕೆ ನಿರ್ಣಯಿಸಲಿ. ಗ್ರಾಹಕರಿಗೆ ಮರಳು ಸರಳ ದೊರಕಬೇಕು, ಅಕ್ರಮ ನಡೆಯಬಾರದು, ಇವೆರಡೂ ಸಂಗತಿ ಗಮನದಲ್ಲಿಟ್ಟುಕಂಡು ಕ್ರಮಕ್ಕೆ ಮುಂದಾಗಲಿ ಎಂದರು.
ಅಫಜಲಪುರ ಶಾಸಕ ಎಂವೈ ಪಾಟೀಲರು ಸಹ ಸದನಲ್ಲಿ ಭೀಮಾ ತೀರ ಅಫಜಲ್ಪೂರದಲ್ಲಿನ ಮರಳು ಅಕ್ರಮ ವಿಚಾರ ಪ್ರಸಾಪಿಸಿ ಅಕ್ರಮ ನಿಲ್ಲಬೇಕು, ನತೆಗೆ ಸರಳವಾಗಿ ಮರಳು ದೊರಕುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.