ಮರಳಿ ಬಂದ ಮಹೇಂದರ್ ಕನ್ನಡಾಭಿಮಾನದ ಪಂಪ

ಒಂದಷ್ಟು ಗ್ಯಾಪ್ ನಂತರ ಹಿರಿಯ ನಿರ್ದೇಶಕ ಎಸ್. ಮಹೇಂದರ್ “ಪಂಪ” ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ ಹೊಂದಿರುವ ಎಸ್ .ಮಹೇಂದ್ರರ್ ಅವರು ಇತ್ತೀಚೆಗೆ‌ ಚಿತ್ರರಂಗದಿಂದ ಕೊಂಚ ಬಿಡುವು ಪಡೆದಿದ್ದರು ಇದೀಗ ಮತ್ತೆ ಸಕ್ರಿಯರಾಗಲು ಮುಂದಾಗಿದ್ದಾರೆ.

ಸದಭಿರುಚಿ ಚಿತ್ರಗಳನ್ನು ನೀಡಿದ ಹಿರಿಮೆಗೆ ಪಾತ್ರರಾಗಿರುವ ಮಹೇಂದರ್ ಅವರು ಇದೀಗ ಕನ್ನಡಾಭಿಮಾನ ಸಾರುವ ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಾಡು-ನುಡಿ ಭಾಷೆಯ ಪ್ರೇಮ ಅನಾವರಣ ಮಾಡಿದ್ದಾರೆ.

ಪಂಪ ಚಿತ್ರಕ್ಕೆ ಮಹೇಂದರ್ ಅವರು, ಕಥೆ-ಚಿತ್ರಕತೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಎಸ್.ಮಹೇಂದರ್. ಚಿತ್ರಕ್ಕೆ ಟೋಟಲ್ ಕನ್ನಡ ವಿ.ಲಕ್ಷ್ಮಿ ಕಾಂತ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಪಂಚಳ್ಳಿ ಪರಶಿವಮೂರ್ತಿ ಹೆಸರನ್ನು ಪಂಪನಾಗಿಸಿ ಕನ್ನಡದ ಅಭಿಮಾನ ಸಾರಿದ್ದಾರೆ.‌ಮಹೇಂದರ್ ಅವರು .ಕುವೆಂಪು ,ಚೆನ್ನವೀರ ಕಣವಿ ,ಹಂಸಲೇಖ ಸಾಹಿತ್ಯವಿದ್ದು ಹಂಸಲೇಖ ಅವರೇ ಸಂಗೀತ ನಿರ್ದೇಶನ‌ ಮಾಡಿದ್ದಾರೆ.

ಚಿತ್ರದಲ್ಲಿ ಕೀರ್ತಿಬಾನು,ಸಂಗೀತ ಶೃಂಗೇರಿ,ರವಿ ಭಟ್,ರೇಣುಕಾ,ರಾಘವ ನಾಯಕ್,ಆದಿತ್ಯ ಶೆಟ್ಟಿ, ಭಾವನಾ ಭಟ್,ಅರವಿಂದ್,ಶ್ರೀನಿವಾಸ್ ಪ್ರಭು,‌ಪೃಥ್ವಿರಾಜ್, ಡಾ. ಚಿಕ್ಕಹೆಜ್ಜಾಜಿ ಮಹದೇವ್, ಅರ್ಚನಾ ಸೇರಿದಂತೆ ಹಲವು ಹಿರಿಯ ಕಿರಿಯ ಕಲಾವಿದರ ದಂಡೇ ಚಿತ್ರದಲ್ಲಿದೆ ಸಂದೇಶ್ ಜೈನ್ ನಿನಾಸಂ ಮೋಹನ್ ಕಾಮಾಕ್ಷಿ ಸಂಕಲನ ಮತ್ತು ರಮೇಶ್ ಬಾಬು ಛಾಯಾಗ್ರಹಣವಿದೆ. ಚಿತ್ರದಲ್ಲಿ ಶ್ರೀನಿವಾಸ್ ಪ್ರಭು, ಪೃಥ್ವಿರಾಜ್, ಅರವಿಂದ ರಾವ್ ಸೇರಿದಂತೆ ಹಿರಿ ಕಿರಿಯ ಕಲಾವಿದರ ಬಹುದೊಡ್ಡ ತಾರಾಬಳಗ ಚಿತ್ರದಲ್ಲಿದೆ

ಟ್ರೈಲರ್ ಗೆ‌ ಮೆಚ್ಚುಗೆ

“ಪಂಪ” ಚಿತ್ರದ ಟೈಲರ್ ಗೆ ಕನ್ನಡ ಚಿತ್ರಗಳಲ್ಲಿ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. ನಿರ್ದೇಶಕ ಎಸ್ ಮಹೇಂದರ್ ಅವರು ಮರಳಿ ಬಂದಿರುವ ಹಿನ್ನೆಲೆಯಲ್ಲಿ ಚಿತ್ರ ಸಾಕಷ್ಟು ಕುತೂಹಲ ಕೆರಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಟ್ರೈಲರ್ ಬಿಡುಗಡೆ ಹೇಗೆ ಕೆಲವೇ ವಾರಗಳಲ್ಲಿ ಸಾವಿರಾರು ಜನರಿಂದ ಪ್ರಶಂಸೆ ಗಳಿಸಿದೆ.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡತನವನ್ನು ಬಗ್ಗಿಸುವ ಪಂಪ ಚಿತ್ರದ ಬಗ್ಗೆ ಚಿತ್ರಂಗದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ