
ಜೇವರ್ಗಿ :ಆ.17: ಬೀದರ ಬೆಂಗಳೂರು ರಾಜ್ಯ ಹೆದ್ದಾರಿಯ ಶಾಹಬಾದ ಕ್ರಾಸ್ ಹತ್ತಿರ ಮರಳಿನ ಲಾರಿ ಅಪಘಾತವಾಗಿದೆ. ಅದೃಷ್ಟಾವಶ ಯಾವುದೆ ಪ್ರಾಣಹಾನಿಯಾಗಿಲ್ಲ.
ಶಾಹಬಾದ ಕ್ರಾಸ್ ಹತ್ತಿರ ಲಾರಿ ಟೈಯರ್ ಒಡೆದು ನಿಯಂತ್ರಣ ತಪ್ಪಿ ಮರಕ್ಕೆ ಲಾರಿ ಡಿಕ್ಕಿ ಹೊಡೆದಿದೆ.
ಬೀದರ್ ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ಮರಳು ಸಾಗಾಣಿಕೆ ವಾಹನದ ಟೈಯರ್ ಒಡೆದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಜೇವರ್ಗಿ ಅಗ್ನಿಶಾಮಕ ಠಾಣಾಧೀಕಾರಿ ಮಲ್ಲಿಕಾರ್ಜುನ್ ಹಾಗೂ ಅವರ ತಂಡ ಆಗಮಿಸಿ, ಚಾಲಕ ಯಂಕಣ್ಣ (35) ಹಾಗೂ ಕ್ಲೀನರ್ ಭಿಮರಾಯ (22) ಇಬ್ಬರನ್ನ ಸುರಕ್ಷಿತವಾಗಿ ಹೊರ ತೆಗೆದರು. ಮಸಿನ್ ಬಳಸಿ ಇಬ್ಬರನ್ನ ಸುರಕ್ಷಿತವಾಗಿ ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು.