ಮರಳಿನ ದಿಬ್ಬ ಕುಸಿದು ಕುಣಿಯಲ್ಲಿದ್ದ ವ್ಯಕ್ತಿ ಸಾವು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ.11 :- ಮನೆಯ ಮುಂದೆ ಸಿಮೆಂಟ್ ಮಾಡಲು ಮರಳಿನ ಅವಶ್ಯಕತೆ ಇದ್ದುದರಿಂದ ಟ್ರ್ಯಾಕ್ಟರ್ ನಲ್ಲಿ ತುಂಬಿಕೊಂಡು ಹೋಗಲು ಬಂದಿದ್ದ ವ್ಯಕ್ತಿ ಮರಳಿನ ದಿಬ್ಬ ಕುಸಿದ ಪರಿಣಾಮ ತಗ್ಗಿನ ಕುಣಿಯಲ್ಲಿ ಸಿಲುಕಿ ವ್ಯಕ್ತಿಯೋರ್ವ  ಸಾವನ್ನಪ್ಪಿರುವ ಘಟನೆ ಮಂಗಳವಾರ ಮಧ್ಯಾಹ್ನ ತಾಲೂಕಿನ ಕುಪ್ಪಿನಕೆರೆ ಕೆರೆಯಲ್ಲಿ ಜರುಗಿದೆ.
ಕೊಟ್ಟೂರು ತಾಲೂಕಿನ ಮಲ್ಲನಾಯಕನಹಳ್ಳಿಯ ವೀರೇಶ (30) ಮರಳಿನಲ್ಲಿ ಸಿಲುಕಿ ಸಾವನ್ನಪ್ಪಿರುವ ದುರ್ದೈವಿ ವ್ಯಕ್ತಿಯಾಗಿದ್ದಾನೆ. ಈತನು ಮನೆಯ ಮುಂದೆ ಸಿಮೆಂಟ್ ಮಾಡುವ ಉದ್ದೇಶದಿಂದ ಮರಳನ್ನು ತನ್ನ ಟ್ರ್ಯಾಕ್ಟರ್ ನಲ್ಲಿ ತುಂಬಿಕೊಂಡು ಹೋಗಲು ಕುಪ್ಪಿನಕೆರೆ ಗ್ರಾಮದ ಕೆರೆಯಂಗಳದಲ್ಲಿ ಈಗಾಗಲೇ ತೆಗೆದಿದ್ದ ಕುಣಿಯಲ್ಲಿ ಮರಳನ್ನು ತಗ್ಗು ತೆಗೆದು ತುಂಬಲು ಮುಂದಾದಾಗ ಕುಣಿಯ ಮೇಲಿನ ದಿಬ್ಬದ ಮಣ್ಣುಆಕಸ್ಮಿಕವಾಗಿ  ಕುಸಿದಿದ್ದು ಕುಣಿಯಲ್ಲಿದ್ದ ವ್ಯಕ್ತಿ ವೀರೇಶ ಹೊರಬರಲಾಗದೆ ಸಿಲುಕಿ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ ಎಂದು ಮೃತನ ಪತ್ನಿ ನೀಡಿದಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ