ಮರಳಿನಲ್ಲಿ ಅರಳಿದ ನೂತನ ಸಂಸತ್ ಪ್ರತಿಕೃತಿ

ಪುರಿ,ಮೇ.೨೮-ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಈ ಸ್ಮರಣೀಯ ದಿನದ ನೆನಪಿಗಾಗಿ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಸಮುದ್ರ ತೀರದ ಮರಳಿನಲ್ಲಿ ಹೊಸ ಸಂಸತ್ ಭವನದ ಪ್ರತಿಕೃತಿಯನ್ನು ರಚಿಸಿದ್ದಾರೆ. ಸೆಂಗೋಲ್ ಜೊತೆಗೆ ಲೋಕಸಭೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಮರಳು ಕಲೆಯಲ್ಲಿ ರಚಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಕಲಾವಿದ ಸುದರ್ಶನ್ ಪಟ್ನಾಯಕ್, ಮರಳು ಶಿಲ್ಪದ ವಿಡಿಯೋವನ್ನು ಹಂಚಿಕೊಂಡು ’ಹೊಸ ಸಂಸತ್ ಭವನವು ನವಭಾರತದ ಸಂಕೇತವಾಗಿದೆ. ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಸ್ವಾತಂತ್ರ್ಯ ಬಂದು ೭೫ ವರ್ಷಗಳ ನಂತರ ನಮ್ಮದೇ ಸಂಸತ್ತು ನಿರ್ಮಾಣವಾಗಿದೆ ಎಂದು ಅವರು ಬರೆದಿದ್ದಾರೆ. ’ನನ್ನ ಸಂಸತ್ತು ನನ್ನ ಹೆಮ್ಮೆ ಎಂಬ ಸಂದೇಶದೊಂದಿಗೆ ಒಡಿಶಾದ ಪುರಿ ಬೀಚ್ ನಲ್ಲಿ ನೂತನ ಸಂಸತ್ ಭವನದ ಮರಳು ಪ್ರತಿಕೃತಿಯನ್ನು ರಚಿಸಿದ್ದಾರೆ.