ಮರದಚ್ಚು ಮುದ್ರಣ ಕಲಾಕೃತಿಗಳ ಪ್ರದರ್ಶನ

ಕಲಬುರಗಿ,ಜು.22:ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಇಂಡಿಯಾ ಫೌಂಡೇಶನ್ ಫಾರ್ ದಿ ಆಟ್ಸ್‍ನ ಸಹಯೋಗದಡಿ ನಗರದ ಮಾತೋಶ್ರೀ ನೀಲಗಂಗಮ್ಮ ಅಂದಾನಿ ಆಟ್ಸ್ ಗ್ಯಾಲರಿಯಲ್ಲಿ ಇದೇ ಜುಲೈ 24, 25 ಹಾಗೂ 26 ರಂದು ಕಲಿ-ಕಲಿಸು ಕಾರ್ಯಯೋಜನೆಯ ಕಲಾ ಸಂಯೋಜಿತ ಪ್ರಯೋಗದಲ್ಲಿ ಕಲಬುರಗಿಯ ಉತ್ತರ ವಲಯದ ಶಹಾಬಜಾರಿನ ಸರಕಾರಿ ಪ್ರೌಢಶಾಲೆಯ ಮಕ್ಕಳು ರಚಿಸಿದ ಮರದಚ್ಚು ಮುದ್ರಣ ಕಲಾಕೃತಿಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸುಮಾರು 35 ಮಕ್ಕಳ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.
24 ರಂದು ಬೆಳಿಗ್ಗೆ 11ಕ್ಕೆ ಈ ಕಲಾಕೃತಿಗಳನ್ನು ನಗರದ ಹಿರಿಯ ಚಿತ್ರಕಲಾವಿದರಾದ ಡಾ. ಅಂದಾನಿ ವಿ. ಜಿ. ಅವರು ಉದ್ಘಾಟಿಸಲಿದ್ದಾರೆ. ಬಾಲ್ಕಿಯ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ಬಸವಂತರಾಯ ಜಿಡ್ಡಿ ಹಾಗೂ ಕಲ್ಯಾಣಪ್ಪ ಹಂಗರಗಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಐ.ಎಫ್.ಎ. ಅನುದಾನ ಪಡೆದು ಮಕ್ಕಳಿಗೆ ಮುದ್ರಣ ಕಲಾ ರಚನೆಯ ತರಬೇತಿ ನೀಡಿದ ಚಿತ್ರಕಲಾವಿದರಾದ ಶ್ರೀ ಚಂದ್ರಹಾಸ ವಾಯ್. ಜಾಲಿಹಾಳ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ಯಾರ್ಥಿಗಳು ರಚಿಸಿದ ಮರದಚ್ಚು ಮುದ್ರಣ ಕಲಾಕೃತಿಗಳ ಪ್ರದರ್ಶನವನ್ನು ದಿನಾಂಕ 24ನೇ ಜುಲೈ 2022 ರಿಂದ 26ನೇ ಜುಲೈ 2022 ರವರೆಗೆ ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಸಾರ್ವಜನಿಕರು ವೀಕ್ಷಿಸಬಹುದಾಗಿದೆ.