ಮರಣ ಹೊಂದಿದ ರೈತರ ಕುಟುಂಬಸ್ತರಿಗೆ ಧನ ಸಹಾಯ

ಬೀದರ:ಜು.21:ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಯರನಳ್ಳಿ ಆಡಳಿತ ಮಂಡಳಿಯಲ್ಲಿ ಒಪ್ಪಿಗೆ ಪಡೆದು 01-06-2022 ರಿಂದ ಮರಣ ಹೊಂದಿದ ಕಿಸಾನ ಕ್ರೇಡಿಟ್ ಕಾರ್ಡ (ಕೆ.ಸಿ.ಸಿ.) ಸಾಲ ಪಡೆದ ರೈತರು ಅಕಾಲಿಕ ಮರಣ ಹೊಂದಿದ ಪ್ರಯುಕ್ತ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಸಂಜು ಸಿದ್ದಾಪೂರ ಇವರು ಮರಣ ಹೊಂದಿದ ರೈತರ ಕುಟುಂಬಸ್ತರಿಗೆ ಸಾಂತ್ವನ ಹೇಳಿ ಸಂಘದ ಪರವಾಗಿ ಧನ ಸಾಹಯ ನಿಡಿದರು.
ಸಂಘದ ನಿರ್ದೇಶಕರಾದ ಗುರುನಾಥ ರಕ್ಷೆ ಮತ್ತು ಕಂಟೆಪ್ಪಾ ಬಿರಾದರ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ರಾಜಕುಮಾರ ಕಾರಬರೆ ಲೇಕ್ಕಿಗರಾದ ಓಂಕಾರ ಅನಕಲೆ ಇತರರು ಇದ್ದರು.