ಮರಣೋತ್ತರ ಪರಿಹಾರ ನಿಧಿ ಟ್ರಸ್ಟ್ ಅಧ್ಯಕ್ಷರಾಗಿ ಅರುಣ್‌ಕುಮಾರ್

ದಾವಣಗೆರೆ.ಜೂ.7: ವಕೀಲರ ಮರಣೋತ್ತರ ಪರಿಹಾರ ನಿಧಿ ಟ್ರಸ್ಟ್ ಅಧ್ಯಕ್ಷರಾಗಿ ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‌ಕುಮಾರ್ ಪದಗ್ರಹಣ ಮಾಡಿದರು.ಟ್ರಸ್ಟ್ ಹಂಗಾಮಿ ಅಧ್ಯಕ್ಷರಾಗಿದ್ದ ಹಿರಿಯ ನ್ಯಾಯವಾದಿ ಎ.ಎಂ.ಹೆಗಡೆ ಅವರಿಂದ ಎಲ್.ಹೆಚ್.ಅರುಣ್‌ಕುಮಾರ್ ಅಧಿಕಾರ ಸ್ವೀಕರಿಸಿದರು. ಈ ವೇಳೆ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ, ಆಂಜನೇಯ ಗುರೂಜಿ, ಎಸ್.ಪರಮೇಶ್, ಎ.ಎಂ.ಹೆಗಡೆ, ಎನ್.ಶ್ರೀನಿವಾಸ್, ಸಿ.ಚನ್ನಮಲ್ಲೇಶ್, ಮಹಮ್ಮದ್ ಮುಸ್ತಾಕ್ ಮಾಲ್ವಿ, ಭಾಗ್ಯಮ್ಮ, ದಾವಣಗೆರೆ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್.ಬಸವರಾಜ್, ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳು, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್ ಇದ್ದರು