ಮರಗಿಡ ಬೆಳೆಸಿ ಮುಂದಿನ ಪೀಳಿಗೆಗೆ ಪರಿಸರ ಉಳಿಸಿ

ದಾವಣಗೆರೆ.ಜೂ.೬: ತಂಜೀಮ್ ಉಲ್ ಮುಸ್ಲಿಮೀನ ಫಂಡ್ ಅಸೋಸಿಯೇಷನ್ (ರಿ) ವತಿಯಿಂದ ಈದ್ಗಾ ಮೈದಾನದಲ್ಲಿ ಸಸಿಗಳನ್ನು ನೆಡುವ ಮೂಲಕ “ಪರಿಸರ ದಿನಾಚರಣೆ” ಆಚರಿಸಲಾಯಿತು.ಅಧ್ಯಕ್ಷತೆ ತಂಝಿಮ್ ಸಂಸ್ಥೆಯ ಅಧ್ಯಕ್ಷ ದಾದಾಪೀರ್ ಸೇಠ ವಹಿಸಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಪ್ರತಿಯೊಬ್ಬರು ಮರ – ಗಿಡಗಳನ್ನು ಬೆಳಸುವ ಮೂಲಕ ಪರಿಸರ ಉಳಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಸಂಸ್ಥೆಯ ಉಪಾಧ್ಯಕ್ಷ ಎಸ್.ಕೆ. ಅಮ್ಮದ್ ಉಲ್ಲಾ, ಕಾರ್ಯದರ್ಶಿ ಸಾಬೀರ್ ಅಲಿ ಖಾನ್, ಖಜಾಂಚಿ ದಾದಾಪೀರ್, ಷಂಶುದ್ದೀನ್ ರಜ್ಜಿ, ವಕೀಲರಾದ ಶೌಕತ್ ಅಲಿ, ಮೊಹಮ್ಮದ್ ಜಬೀವುಲ್ಲಾ ಐ.ಟಿ.ಐ, ಹೆಚ್ ಶಪೀವುಲ್ಲಾ, ಹಾಜೀ ಮೂಸಾ ಕಲೀಮುಲ್ಲಾ, ಇಮ್ರಾನ್ ರಜಾ, ಸನಾವುಲ್ಲಾ, ಇಮ್ಮಿಯಾಜ್, ಬೇಗ್, ಜಬೀವುಲ್ಲಾ ವೈ, ಹಾಗೂ ನಾಸೀರ್, ತಜಮುಲ್, ವಜೀರ್, ಮಹಬೂಬ್ ಇನ್ನಿತರರು ಇದ್ದರು.