ಮರಗಳನ್ನು ಬೆಳೆಸುವುದು ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ಶಿವ ಅಷ್ಟಗಿ

ಕಲಬುರಗಿ ಜೂ.5 : ಸಸಿಗಳನ್ನು ನೆಡುವುದು ಮರಗಳನ್ನು ಬೆಳೆಸುವುದು ಮತ್ತು ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಟಗಿ ಹೇಳಿದರು
ಕಲಬುರ್ಗಿ ತಾಲೂಕಿನ ಕುಸ್ನೂರ್ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು ಮಾತನಾಡುತ್ತಿದ್ದರು ಪ್ರಸ್ತುತ ಸಂದರ್ಭದಲ್ಲಿ ಗಾಳಿಯ ಮತ್ತು ಮರಗಳ ಅವಶ್ಯಕತೆಗಳ ಬಗ್ಗೆ ಜನರಿಗೆ ಮನವರಿಕೆಯಾಗಿದೆ ಕೊರೋನಾ ಮಹಾಮಾರಿ ಸಾಂಕ್ರಾಮಿಕ ಹಬ್ಬಿದ ಸಂದರ್ಭದಲ್ಲಿ ಅನೇಕ ರೋಗಗಳು ಆಕ್ಸಿಜನ್ ಇಲ್ಲದೆ ಪರದಾಡಿದ್ದು ನೋಡಿದಾಗ ಪರಿಸರ ಮತ್ತು ಮರಗಳ ಪ್ರಾಮುಖ್ಯತೆ ಗೊತ್ತಾಗಿದೆ. ಮರಗಳನ್ನು ಬೆಳೆಸುವುದರಿಂದ ಶುದ್ಧವಾದ ಗಾಳಿ, ನೆರಳು ಒಳ್ಳೆಯ ಮಳೆ ಸ್ವಚ್ಛವಾದ ಪರಿಸರಸಿಗುತ್ತದೆ.
ಮರಗಳನ್ನು ಬೆಳೆಸುವುದು, ಅವುಗಳನ್ನು ಪೋಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.

ಸಂದರ್ಭದಲ್ಲಿ ಬಿಜೆಪಿ ಕಲಬುರ್ಗಿ ಗ್ರಾಮೀಣ ಮಂಡಲ ಉಪಾಧ್ಯಕ್ಷ ವಿನೋದ್ ಪಾಟೀಲ್ ಸರಡಗಿ, ಬಿಜೆಪಿ ಮುಖಂಡರಾದ ಜಗದೀಶ್ ಪಾಟೀಲ್ ಸಣ್ಣೂರ್, ರೇವಣಸಿದ್ದಯ್ಯ ಮಠಪತಿ ನಾಗಣ್ಣ ದಂಡೋತಿ, ವಿಜಯಕುಮಾರ್ ಜಮಾದಾರ ಸಿದ್ದು ಸಂಗೋಳಗಿ, ಶರಣಬಸಪ್ಪ ಚಕ್ರವರ್ತಿ ಇದ್ದರು.