ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ

ಜಗಳೂರು;ಜೂ:6; ಮಹಾಮಾರಿ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುತ್ತಿರುವ ಈಸಂದರ್ಭದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ರಕ್ಷಣೆ ಮತ್ತು ಗಿಡ ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕು ಎಂದು.ನ್ಯಾಯಾಧೀಶರುಹಾಗೂ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಜಿ. ತಿಮ್ಮಯ್ಯ.ಅವರು ತಿಳಿಸಿದರು.ತಾಲ್ಲೂಕು ಕಾನೂನು ಸೇವಾ ಸಮಿತಿ, ಹಾಗೂ ಅರಣ್ಯ ಇಲಾಖೆಯ‍ ಸಹಯೋಗದೊಂದಿಗೆ ಪರಿಸರ ದಿನಾಚಣೆಯ ಪ್ರಯುಕ್ತ , ಕೋವಿಡ್‍ -19 ಮಾರ್ಗ ಸೂಚಿಯನ್ನು ಅನುಸರಿಸಿ ಸಾಂಕೇತಿಕವಾಗಿ , ನ್ಯಾಯಾಲಯದ ಆವರಣದಲ್ಲಿ   ಸಾಂಕೇತಿಕವಾಗಿ  ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.ಇಂದಿನ ಪರಿಸ್ಥಿಯಲ್ಲಿ ಗಿಡ ಮರಗಳನ್ನು ಕಾಪಾಡುವುದು ಅನಿವಾರ್ಯವೂ ಸಹ ಆಗಿರುತ್ತದೆ. ಆದ್ದರಿಂದ ಪರಿಸರ ದಿನಾಚರಣೆಯ ಅಂಗವಾಗಿ ಪ್ರತಿಯೊಬ್ಬರು ಒಂದು ಗಿಡ ನೆಡಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿದರು.
 ನ್ಯಾಯಾಲಯದ ಆವರಣದಲ್ಲಿ ಹಿಂದಿನ ವರ್ಷದ ಪರಿಸರ ದಿನಾಚರಣೆಯಲ್ಲಿ ನೆಟ್ಟ ಎಲ್ಲಾ ಗಿಡಗಳು ಚೆನ್ನಾಗಿ ಬೆಳವಣಿಗೆಯಾಗಿರುವುದು ಸಂತಸವಾಗಿದೆಎಂದು ನ್ಯಾಯಾಧೀಶರು ಹೇಳಿದರು. ಅರಣ್ಯ ಇಲಾಖೆಯ ಮತ್ತು ನ್ಯಾಯಾಲಯದಸಿಬ್ಬಂದಿ ಇದ್ದರು.