ಮರಗಮ್ಮಾ ದೇವಿ ಆಷಾಢ ಉತ್ಸವ

ಶಹಾಬಾದ:ಜು.12:ನಗರದ ಭೋವಿ (ವಡ್ಡರ) ಸಮಾಜದ ವತಿಯಿಂದ ನಗರದಲ್ಲಿ ಆಷಾಢ ಮಹೋತ್ಸವ ನಿಮಿತ್ತ ಆದಿಶಕ್ತಿ ಮರಗಮ್ಮಾ ದೇವಿಯ ಉತ್ಸವ ನಿಮಿತ್ತ ಮುತೈದೆಯರುವ ಪೂರ್ಣ ಕುಂಭಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು.

ಬೆಳಗ್ಗೆ ಭೀಮಶಪ್ಪ ತೋಟದಿಂದ ಪ್ರಾರಂಭವಾದ ಮೆರವಣಿಗೆ ಬಸವಣ್ಣನ ದೇವಸ್ಥಾನ, ಸ್ವಾಮಿ ವಿವೇಕಾನಂದ ವೃತ್ತ, ವಲ್ಲಭಭಾಯಿ ಪಟೇಲ ವೃತ್ತ, ಸುಭಾಷ ಚೌಕ ಮೂಲಕ ಮರಗಮ್ಮಾ ದೇವಿ ದೇವಸ್ಥಾನ ತಲುಪಿತು. ಮಹಿಳೆಯರು ದೇವಿಯ ಪಾದಗಟ್ಟೆಗೆ ಬೇವಿನ ಎಗಳೊಂದಿಗೆ ನೀರು ಹಾಕಿ ಪುನೀತರಾಗಿ, ಹೂವು ಹಣ್ಣು, ಕಾಯಿ ಅರ್ಪಿಸಿದರು.

ಮೆರವಣಿಗೆಯಲ್ಲಿ ವಿವಿಧ ವಾದ್ಯಘೋಷ, ಪೋತರಾಜರ ಕುಣಿತ ಗಮನ ಸೆಳೆದವು, ಸಮಾಜದ ಮುಖಂಡರಾದ ಜಯಹಿಂದ ಚೌಧರಿ, ಭೀಮರಾವ ಸಾಳೊಂಕೆ, ಮೋತಿಲಾಲ್ ಪವಾರ, ರಾಮು ಕುಸಾಳೆ, ಗಣಪತಿ ಪವಾರ, ವೆಂಕಟೇಶ ಕುಸಾಳೆ, ಯಲ್ಲಪ್ಪ ದಂಡಗುಲಕರ್, ಸಿದ್ರಾಮ ಕುಸಾಳೆ, ರಾಜಣ್ಣ ಪವಾರ, ಗೋವಿಂದ ದಂಡಗುಲರಕ್, ಶಂಕರ ಕುಸಾಳೆ, ದತ್ತು ಕುಸಾಳೆ, ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.