ಮರಕ್ಕೆ ಬೈಕ್‌ ಡಿಕ್ಕಿ: ಸವಾರ ಮೃತ್ಯು 

ಮೂಡಬಿದ್ರೆ, ನ.2೨- ಚಾಲಕನ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನವೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಮೂಡಬಿದ್ರೆ  ತಾಲೂಕಿನ ಕಾಂತವಾರ ಕ್ರಾಸ್ ಬಳಿ ರವಿವಾರ ತಡರಾತ್ರಿ ನಡೆದಿದೆ.

ಮೂಲತಃ ಚಿಕ್ಕಮಗಳೂರು ನಿವಾಸಿ, ಪ್ರಸಕ್ತ ಮಹಾವೀರ ಕಾಲೇಜು ಬಳಿಯ ರಾಣಿಕೇರಿಯಲ್ಲಿ ವಾಸವಿದ್ದ ರಾಜೇಶ್ (28) ಮೃತಪಟ್ಟವರು. ರಾಜೇಶ್ ಅವರ ಅಜ್ಜಿ ಬಾಳೆಹೊನ್ನೂರಿನಲ್ಲಿ ರವಿವಾರ ಬೆಳಗ್ಗೆ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳಿದ್ದ ಅವರು ಅಂತ್ಯ ಸಂಸ್ಕಾರ ಕಾರ್ಯಗಳೆಲ್ಲ ಮುಗಿಸಿ ತಡರಾತ್ರಿ ವೇಳೆ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾಂತವಾರ ಕ್ರಾಸ್ ಬಳಿ ದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಪರಿಣಾಮ ರಾಜೇಶ್ ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜೇಶ್ ಪತ್ನಿ ಮತ್ತು 5 ತಿಂಗಳ ಮಗುವನ್ನು ಅಗಲಿದ್ದಾರೆ.