ಮರಕ್ಕೆ ಕಾರು ಡಿಕ್ಕಿ ಇಬ್ಬರು ಸಾವು

ಆನೇಕಲ್, ಜು.೧೮: ಅತಿ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರ ಸಾವು, ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಆನೇಕಲ್ ಪೋಲಿಸ್ ಠಾಣೆಯ ಸೋಲೂರು ಬಳಿ ಕಳೆದ ರಾತ್ರಿ ನಡೆದಿದೆ.
ಅಪಘಾತದಲ್ಲಿ ಮೃತರಾದವರು ಬೈರೇಶ್ ೩೪ ವರ್ಷ ಕುಣಿಗಲ್. ಶಶಿಧರ್ ೩೧ ವರ್ಷ ಹೊಂಗಸಂದ್ರ ಬೆಂಗಳೂರು ನಗರ. ಗಾಯಾಳುಗಳಾದ ರಾಹುಲ್ ೨೧ ವರ್ಷ ಸಿಂಗಸಂದ್ರ ಗ್ರಾಮ ಬೆಂಗಳೂರು ನಗರ , ಮಿಥುನ್ ರೆಡ್ಡಿ ೨೨ ವರ್ಷ ದೊಮ್ಮಸಂದ್ರ ಆನೇಕಲ್ ತಾಲೂಕು, ತಿಪ್ಪೇಶ್ ೪೧ ಗಾರ್ವೆಬಾವಿ ಪಾಳ್ಯ ಬೆಂಗಳೂರು. ಐದು ಜನರು ಒಂದೇ ಕಾರಿನಲ್ಲಿ ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಮರಳಿ ಮನೆಗೆ ತೆರಳುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್ ಪೋಲಿಸರು ತನಿಖೆ ಕೈಗೊಂಡಿದ್ದಾರೆ.