ಮರಕಲ್ ಸರಕಾರಿ ಪ್ರಾಥಮಿಕಶಾಲೆಗೆ ಅರಳಿ ಭೇಟಿ

ಬೀದರ ಜು 17: ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ ಅರಳಿ ಅವರು ಸಾಮಾಜಿಕ ಜಾಲತಾಣದಲ್ಲಿ ಬಂದ ಸುದ್ಧಿಯ ಹಿನ್ನೆಲೆಯಲ್ಲಿ ಬೀದರ ತಾಲೂಕಿನ ಮರಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು.
ಶಾಲೆಯ ಮೂಲಭೂತ ಸೌಕರ್ಯಗಳ ಹಾಗೂ ಶಾಲೆಯ ಆವರಣದಲ್ಲಿ ಮಾಲಿನ್ಯ ನೋಡಿ ತೀವ್ರ ಬೇಸರಗೊಂಡರು. ಕೂಡಲೇ ಸಂಬಂಧಪಟ್ಟ ಇಲಾಖೆಗೆ ಸಮಸ್ಯೆ ಬಗೆಹರಿಸುವುದಕ್ಕೆ ಹೇಳಿದರು. ಶಾಲೆಯ ಮುಂದೆ ಸಿ.ಸಿ ರಸ್ತೆ ಮತ್ತು ಸುತ್ತು ಗೋಡೆ ನಿರ್ಮಾಣದ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಸಂಯೋಜಕ ಮೋಹಮ್ಮದ್ ಪಟೇಲ್ ಗ್ರಾಒಂ ಅಧ್ಯಕ್ಷ ಚಂದ್ರಕಾಂತ ಬೂಯ್ಯ, ಗ್ರಾಮದ ಮುಖಂಡರಾದ ಶ್ರೀಕಾಂತ ತಿಪ್ಪಗೊಂಡ್, ಸೋಮಣ್ಣ ಓಂಕಾರೆ, ತಾಪಂ ಮಾಜಿ
ಸದಸ್ಯ ಬಸವರಾಜ ಬೂಯ್ಯ, ಲೋಕೇಶ್ ಬಿರಾದಾರ, ಅಶೋಕ್
ಕೈಕಾಳೆ, ವೈಜಿನಾಥ ಕೋಳಿ, ಕಾರ್ಯಕರ್ತರು ಉಪಸ್ಥಿತರಿದ್ದರು.