ಮರಕಲ್‍ನಲ್ಲಿ ಅಖಂಡ ಹರಿನಾಮ ಸಪ್ತಾಹ

ಬೀದರ್:ಮಾ.30: ತಾಲ್ಲೂಕಿನ ಮರಕಲ್ ಗ್ರಾಮದ ಪಾಂಡುರಂಗ ಮಂದಿರದಲ್ಲಿ ಅಖಂಡ ಹರಿನಾಮ ಸಪ್ತಾಹ ಶ್ರದ್ಧೆ, ಭಕ್ತಿಯಿಂದ ನಡೆಯುತ್ತಿದೆ.

ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಣೆ ಮಾಡುತ್ತಿದ್ದಾರೆ.

ವೈಜಿನಾಥ ಮಹಾರಾಜ, ಮೀರಾಬಾಯಿ, ಸುಭಾಷ್ ದದ್ದಾಪುರ, ಪಂಢರಿ ಜಂಗಿ, ವೀರಶೆಟ್ಟಿ ಬಿರಾದಾರ, ದಾಮೋದರ, ಕಾಶೀನಾಥ ಮತ್ತಿತರರ ಮುಂದಾಳತ್ವದಲ್ಲಿ ನಿತ್ಯ ಗೀತಾ ಪಾರಾಯಣ, ಭಜನೆ, ಕೀರ್ತನೆ, ಆರತಿ, ಅನ್ನ ದಾಸೋಹ ಮೊದಲಾದ ಕಾರ್ಯಕ್ರಮಗಳು ಜರುಗುತ್ತಿವೆ.

ಸುಭಾಷರಾವ್ ಮಹಾರಾಜ ಭವಾನಿ ಬಿಜಲಗಾಂವ್, ಮಧುಕರರಾವ್ ಮಹಾರಾಜ, ಜ್ಞಾನೋಬಾ ಮಹಾರಾಜ್, ದಿಗಂಬರರಾವ್ ಮಹಾರಾಜ, ಖಂಡೋಬಾ ಮಹಾರಾಜ್ ಮರಕಲ್ ಅವರು ಭಜನೆ, ಕೀರ್ತನೆ ನಡೆಸಿಕೊಡುತ್ತಿದ್ದಾರೆ.

ಏಪ್ರಿಲ್ 3 ರಂದು ಸಪ್ತಾಹ ಸಮಾರೋಪಗೊಳ್ಳಲಿದೆ. ಅಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಗ್ರಾಮದ ಯುವ ಮುಖಂಡ ಲೋಕೇಶ ಬಿರಾದಾರ ತಿಳಿಸಿದ್ದಾರೆ.