ಮಯಾಂಕ್ ಭರ್ಜರಿ ಶತಕ, ಕಿವೀಸ್ ವಿರುದ್ಧ ಭಾರತ 4 ವಿಕೆಟ್ ನಷ್ಟಕ್ಕೆ 221 ರನ್

ಮುಂಬೈ, ಡಿ.3- ಮಯಾಂಕ್ ಅಗರ್ ವಾಲ್ ಭರ್ಜರಿ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ನಾಲ್ಕನೆ ಶತಕ ಬಾರಿಸಿದ್ದಾರೆ. ಈ ಮೂಲಕ ಕಿವೀಸ್ ಬೌಲರ್ ಗಳ ಮೇಲೆ‌ ಮಯಾಂಕ್ ಸವಾರಿ ಮಾಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ಮಯಾಂಕ್ ಹಾಗೂ ಶುಭ್ ಮನ್ ಗಿಲ್ 80 ರನ್ ಸೇರಿಸಿದರು.
44 ರನ್​ಗಳಿಸಿ ಆಡುತ್ತಿದ್ದ ಗಿಲ್​​ ಎಡಗೈ ಸ್ಪಿನ್ನರ್​​ ಅಜಾಜ್ ಪಟೇಲ್​​ಗೆ ವಿಕೆಟ್​​ ಒಪ್ಪಿಸಿದರು.
ಇದರ ಬೆನ್ನಲ್ಲೇ ಪೂಜಾರಾ ಹಾಗೂ ವಿರಾಟ್​​ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ತಂಡವನ್ನ ಸಂಕಷ್ಟಕ್ಕೆ ಸಿಲುಕಿಸಿದರು.
ಈ ವೇಳೆ ಶ್ರೇಯಸ್​ ಅಯ್ಯರ್​ ಹಾಗೂ ವೃದ್ಧಿಮಾನ್​ ಸಾಹಾ ಜೊತೆ ಜವಾಬ್ದಾರಿಯುತ ಬ್ಯಾಟಿಂಗ್​ ಪ್ರದರ್ಶನ ನೀಡಿದ ಮಯಾಂಕ್​​​ ಶತಕ ಸಿಡಿಸಿ ಮಿಂಚಿದರು.
ಅಗರ್ ವಾಲ್ 246 ಎಸೆತಗಳನ್ನು ಎದುರಿಸಿ ನಾಲ್ಕು ಸಿಕ್ಸರ್ ಹಾಗೂ 14 ಬೌಂಡರಿಗಳ ನೆರವಿನಿಂದ ಅಜೇಯ 12O ರನ್ ಗಳಿಸಿ ಆಡುತ್ತಿದ್ದಾರೆ.
ಹಿಂದೆ 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಟೆಸ್ಟ್​​ ಪಂದ್ಯದಲ್ಲಿ ಶತಕ ಸಿಡಿಸಿದ್ದ ಮಯಾಂಕ್​​ ಅಗರವಾಲ್​ ತದನಂತರ ಶತಕ ವಂಚಿತರಾಗಿದ್ದರು. ಆದರೆ, ಇದೇ ಮುಂಬೈ ಮೈದಾನದಲ್ಲಿ ತಮ್ಮ ಶತಕದ ಬರ ತೀರಿಸಿಕೊಂಡಿದ್ದಾರೆ. ಇದೇ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್​​ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ಮಯಾಂಕ್​ ಮಿಂಚಿದ್ದರು.
ಮೊದಲು ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಶ್ರೇಯಸ್ ಅಯ್ಯರ್ 18 ರನ್ ಗಳಿಸಿದರು. ದಿನದಾಟದ ಅಂತ್ಯಕ್ಕೆ ಮಯಾಂಕ್ 120 ಹಾಗೂ ವೃದ್ದಿಮಾನ್ ಸಾಹ 25 ರನ್ ಗಳಿಸಿ ಆಡುತ್ತಿದ್ದಾರೆ.
ಕಿವೀಸ್ ಪರ ಅಜಾಜ್ ಪಟೇಲ್ ನಾಲ್ಕು ವಿಕೆಟ್ ಪಡೆದರು.