ಮನ ಸೆಳೆದ ವಚನ ಗಾನೋತ್ಸವ

ಕಲಬುರಗಿ,ನ.9-ದೇವರದಾಸಿಮಯ್ಯ ಸಂಗೀತ ಕಾಲ ಸಂಘ ಮಾದನ ಹಿಪ್ಪರಗಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ವಚನ ಗಾನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ನಗರದ ರಾಮತೀರ್ಥ ನಗರದಲ್ಲಿರುವ ಅಂಭಾ ಭವಾನಿ ದೇವಸ್ಥಾನ ಆವರಣದಲ್ಲಿ ಬಹು ಸುಂದರವಾಗಿ ಜರುಗಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಮಂಜುಳಾ ನಾರಾಯಣರಾವ ಸುಗಂಧಿ, ಮಡಿವಾಳಯ್ಯ ಹಿರೇಮಠ ಕೊರಳ್ಳಿ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗ್ಯಜ್ಯೋತಿ ಶರಣು ಪಟ್ಟಣ, ಜಗದೇವಿ ರಮೇಶ ಪಾಟೀಲ, ಮಹಾನಂದಾ ಕಲ್ಯಾಣಿ ಜಮಾದಾರ, ಜ್ಯೋತಿ ಹಣಮಂತ್ರಾಯ ಕಟ್ಟಿ ಆಗಮಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರಾದ ರಾಚಯ್ಯಸ್ವಾಮಿ ರಟಗಲ್, ಶ್ರೀಶೈಲ್ ಶಿವಲಿಂಗಪ್ಪ ಪಾಟೀಲ, ರುಕ್ಮಿಣಿ ರಾಜಶೇಖರ್ ಶಿರಗಾಪುರ, ನಾಗೇಂದ್ರಪ್ಪ ಸೈದಪ್ಪ ಸಪ್ಪನಗೋಳ, ವಾದ್ಯ ಸಹಕಾರ ಮೌನೇಶ ಪಾಂಚಾಳ ನೀಡಿದರು.
ಹಿರಿಯ ಕಲಾವಿದರಾದ ರವಿ ಸ್ವಾಮಿ ಗೋಟೂರ್, ಶಿವಾನಂದ ಹಿತ್ತಲ ಶಿರೂರು, ಸಂಸ್ಥೆ ಅಧ್ಯಕ್ಷ ಸೂರ್ಯಕಾಂತ.ಎಮ್. ಗುಳಗಿ ಮತ್ತು ನವ ಕರ್ನಾಟಕ ಸಂಗಿತ ಪದವಿಧರರ ಸಂಘದ ರಾಜ್ಯಾಧ್ಯಕ್ಷ ಬಂಡಯ್ಯ ಸ್ವಾಮಿ ಸುಂಟನೂರ ಉಪಸ್ಥಿತರಿದ್ದರು.