ಮನ ಶಾಂತಿಗೆ ವಚನಗಳೆ ದಿವ್ಯ ಔಷಧಿ : ಶಂಭುಲಿಂಗ ಕಾಮಣ್ಣ

ಹುಮನಾಬಾದ : ಸೆ.16:ಮನ ಶುದ್ದಿ ಮತ್ತು ಶಾಂತಿಗಾಗಿ ಬಸವಾದಿ ಶಿವಶರಣರ ವಚನಗಳು ದಿವ್ಯ ಔಷದಿಯಾಗಿ ನಮ್ಮ ಆರೋಗ್ಯ ಕಾಪಾಡುತ್ತವೆ ವಚನ ಸಾಹಿತ್ಯ ಆವರಣವಾಗಿ ನಮ್ಮ ವ್ಯಕ್ತಿತ್ವ ರಕ್ಷಣೆ ನೀಡುತ್ತದೆ. ಲೋಕದಲ್ಲಿ ಹುಟ್ಟಿದ ಬಳಿಕ ಸುತ್ತಿ ನಿಂದಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೆಕೆಂದು ವಚನ ಸಾಹಿತ್ಯ ನಿರ್ದೆಸಿಸುತ್ತದೆಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಂಭುಲಿಂಗ ಕಾಮಣ್ಣ ಅವರು ಬಸವನಗರ ಬಡಾವಣೆಯ ತುಪ್ಪದ್ ರವರ ಮಹಾ ಮನೆಯಲ್ಲಿ ಶ್ರಾವಣ ಮಾಸದ ವಚನ ಚಿಂತನ ಸಮಾರೋಪ ಕಾರ್ಯಕ್ರಮದಲ್ಲಿ ಅನುಭಾವ ನುಡಿದರು.

ಪ್ರಾಸ್ತಾವಿಕ ನುಡಿಯನ್ನು ಮಲ್ಲಿಕಾರ್ಜುನ ಸಂಗಮಕರ್ ಬಸವ ಸೇವಾ ಪ್ರತಿಷ್ಠಾನ ವತಿಯಿಂದ ಪ್ರತಿನಿತ್ಯ ಸಾಯಂಕಾಲ ಬಸವ ಗುರುವಿನ ಪೂಜೆ ಪ್ರಾರ್ಥನೆ ಅನುಭಾವ ಬಹಳ ಅರ್ಥಪೂರ್ಣವಾಗಿ ನಡೆಯಿತು ಮನದ ಮೈಲಿಗೆಯನ್ನು ಕಳೆಯಬೇಕಾದರೆ ಕೂಡಲ ಚನ್ನಸಂಗನ ಶರಣರ ಅನುಭವದ ನುಡಿಗಳು ಕೇಳುವುದು ರೂಡಿಸಿಕೊಳ್ಳಬೇಕು ಎಂದು ಮತನಡುತ್ತ ನುಡಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಸ್ ಆರ್ ಮಠಪತಿ ವಹಿಸಿ ಶ್ರಾವಣ ಮಾಸದಲ್ಲಿ ನಾವೆಲ್ಲರು ಬಸವಾದಿ ಶರಣರ ವಚನಗಳನ್ನು ಪಠಿಸಿ ಆತ್ಮಶುದ್ದಿ ಮಡಿಕೊಳ್ಳಬೇಕೆಂದು ಮಾತನಾಡುತ್ತ ನುಡಿದರು.

ಬಾಬುರಾವ ತುಪ್ಪದ ಮತ್ತು ಪಂಡಿತ ಬಾಳೂರೆ ಅತಿಥಿಗಳಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ
ಶರಣಬಸಪ್ಪ ಪಾರ, ಮಡಿವಾಳಯ್ಯ ಸ್ವಾಮಿ, ಮಲ್ಲಿಕಾರ್ಜುನ್ ರಟಗಲ್, ಉನ್ನಸಾಬ್, ಚಂದ್ರಕಾಂತ ಪ್ರಭಾ ಗೋರಖನಾಥ, ಐ.ಎಸ್ ಶಕೀಲ್, ಮಹೇಶ ಹುಡೇದ್,ರಾಘವೇಂದ್ರ ಕಲ್ಯಾಣಕರ್, ಮಹಾನಂದಾ ರಟಕಲ್ ಜೈಶ್ರೀ ಕಾಳಗಿ, ಸಂಗಮ ಬಮ್ಮಾಣಿ, ಸರೋಜಾ ಕಲ್ಯಾಣಕಾರ್, ಆಶಾರಾಣಿ ಶೇಟಗಾರ, ಕಲ್ಪನಾ ಕಲ್ಲೂರ್, ಶೋಭಾ ಅವರಾದೆ ಸ್ವಾಗತಿಸಿದರು, ಕರುಣಾ ಸಲಗರ ನಿರೂಪಿಸಿದರು, ನಿರಂಕಾರ ತುಪ್ಪದ ವಂದಿಸಿದರು,