ಮನ ಪರಿವರ್ತನೆಯಲ್ಲಿ ನಾಟಕಗಳ ಪಾತ್ರ ಹಿರಿದು

ಭಾಲ್ಕಿ:ಆ.2:ಜನರ ಮನಸ್ಸು ಪರಿವರ್ತಿಸುವಲ್ಲಿ ನಾಟಕಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ಹಮ್ಮಿಕೊಂಡಿದ್ದ ನಾಟಕದೊಳ್ ಕರ್ನಾಟಕ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಬಾಲ್ಯದಲ್ಲಿ ವೀಕ್ಷಿಸಿದ್ದ ಸತ್ಯ ಹರಿಶ್ಚಂದ್ರ ನಾಟಕ ಅವರ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ಆ ನಾಟಕದಿಂದ ಗಾಂಧೀಜಿ ಅವರು ಸತ್ಯ, ಪ್ರಾಮಾಣಿಕತೆ ಸೇರಿದಂತೆ ಅನೇಕ ಮಾನವೀಯ ಮೌಲ್ಯಗಳನ್ನು ಕಲಿತಿದ್ದರು ಎಂದು ತಿಳಿಸಿದರು.

ಜಾನಪದ ಕಲಾವಿದರ ಬಳಗದ ಸಹಕಾರದೊಂದಿಗೆ
ರಂಗಪಯಣ
ತಂಡದ
ಅವಿನಾಶ ಶಿವಪುರೆ ನಾಟಕ ಪ್ರದರ್ಶಿಸಿದರು.

ಜಾನಪದ ಕಲಾವಿದರ ಬಳಗದ
ಅಧ್ಯಕ್ಷ ವಿಜಯಕುಮಾರ ಸೋನಾರೆ, ಕಲಾವಿದರಾದ
ತಿಪ್ಪಣ್ಣ ಶಿವಪುರೆ, ಬಸವರಾಜ ಮಾಸಾಜಿ, ಅಶೋಕ ಮಾಳಗೆ, ದೈವತಾ ಶಿವಪುರೆ,
ನಯನ ಸೋಡ,
ರಾಜಗುರು, ವಿಜಯ ಕುಮಾರ,
ನಾಗಶ್ರೀ, ಲಕ್ಷ್ಮಣ ಮೇತ್ರೆ ಇದ್ದರು.