ಮನ್ ಕೀ ಬಾತ್ ಬೇಡ ಕಾಮ್ ಕೀ ಬಾತ್ ಹೇಳಿ ಆಪ್ ಅಭ್ಯರ್ಥಿ ಕೇಶವ ರೆ‌ಡ್ಡಿಯ ಪ್ರಸ್ತಾಪ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.03: ಇಲ್ಲಿನ ದೇವಿನಗರದಲ್ಲಿಂದು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೊಱ್ಲಗುಂದಿಯ ವಿ.ಕೇಶವರೆಡ್ಡಿಯವರು ಬಳ್ಳಾರಿ ನಗರಕ್ಕೆ ಬರುವ ಪ್ರಧಾನಿ ಮೋದಿಯವರು ಕೇವಲ ರೇಡಿಯೋದಲ್ಲಿ ಮನ್ ಕೀ ಬಾತ್ ಮಾತನಾಡದೇ ರಾಜ್ಯದ ಜನತೆಗೆ ಏನ್ನನ್ನು ಮಾಡದೆ ಎಂಬುದನ್ನು ಮತದಾರರಿಗೆ ತಿಳಿಸಲಿ ಎಂಬ ಪ್ರಸ್ತಾಪವನ್ನು ಮಾಡಿದ್ದಾರೆ.
ದೆಹಲಿ ಮತ್ತು ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷವು ಜನತೆಗೆ ಉತ್ತಮ ಆರೋಗ್ಯ, ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಿದೆ ಅಲ್ಲದೇ 200 ಯ್ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿದೆ. ಇದರ ಮೂಲಕ ಆ ರಾಜ್ಯಗಳಲ್ಲಿ ನಮ್ಮ ಪಕ್ಷ ಮತದಾರರ ಮನ ಗೆದ್ದಿದೆ ಎಂದರು.
ರಾಜ್ಯದಲ್ಲಿಯೂ ಅಭಿವೃದ್ಧಿಗಾಗಿ ಈ ಪ್ರಸಕ್ತ ಚುನಾವಣೆಯಲ್ಲಿ ಆಮ್ ಆದ್ಮಿಗೆ ಪೂರ್ಣ ಬೆಂಬಲ ಬರುವಂತೆ ಜನತೆ ಅವಕಾಶ ನೀಡಿದರೆ ಇಲ್ಲಿಯೂ ದೆಹಲಿ ಮತ್ತು ಪಂಜಾಬ್ ರಾಜ್ಯಗಳಂತೆ ಅಭಿವೃದ್ಧಿ ಸಾಧ್ಯ ಎಂದು ಮತದಾರರಿಗೆ ತಿಳಿಸಿ ತಮಗೆ ಮತ ನೀಡುವಂತೆ ಕೋರಿದ್ದಾರೆ.
ಪ್ರಚಾರ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಹಿರೇಮಠ್, ನಗರ ಅಧ್ಯಕ್ಷ ಜೆ.ವಿ.ಮಂಜುನಾಥ, ಜಿಲ್ಲಾಧ್ಯಕ್ಷ ಕಿರಣ್ ಕುಮಾರ್, ಮುಖಂಡರುಗಳಾದ ದಾದ ಖಲಂದರ್, ಬಾಲಾಜಿ, ಕೊಳಗಲ್ಲು ವೀರೇಶ್, ಬಿ.ವಿ.ಮಲ್ಲಪ್ಪ, ಗುರುಮೂರ್ತಿ, ಮತ್ತು ಕಾರ್ಯಕರ್ತರು ಪ್ರಚಾರ ಕಾರ್ಯದರ್ಶಿ ಭಾಗವಹಿಸಿದ್ದರು.