ಮನ್ ಕೀ ಬಾತ್ ಆಲಿಸಿದ ಜೈ ಶಂಕರ್

ನ್ಯೂಜೆರ್ಸಿ, ಏ.೩೦- ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್ ನ ೧೦೦ ನೇ ಸಂಚಿಕೆಯನ್ನು ಕೇಳಲು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಇಂದು ಅಮೆರಿಕಾದಲ್ಲಿನ ಭಾರತೀಯರೊಂದಿಗೆ ಜತೆಗೂಡಿದರು.
ನ್ಯೂಜೆರ್ಸಿಯಲ್ಲಿರುವ ಭಾರತೀಯ ವಲಸಿಗರೊಂದಿಗೆ ಜತೆಯಾದ ಅವರು ಪ್ರಧಾನಿ ಮೋದಿ ಅವರು ವಿದೇಶದಲ್ಲಿರುವ ಭಾರತೀಯರ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ನುಡಿದರು.
ಮತ್ತೊಂದೆಡೆ, ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಪ್ರಸಾರಕ್ಕೂ ಮುನ್ನ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಲಂಡನ್‌ನಲ್ಲಿರುವ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದರು.