ಮನ್ ಕಿ ಬಾತ್ ಕೇಳಲು ಮದುವೆ ಮುಂದೂಡಿದ ವರ

ಭಿಲ್ವಾರಾ (ರಾಜಸ್ಥಾನ) .ಮೇ೧: ರಾಜಸ್ಥಾನದ ಭಿಲ್ವಾರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲಿ ಮದುವೆಗೂ ಮುನ್ನ ಮದುವೆ ಕಾರ್ಯಕ್ರಮದ ಮಧ್ಯೆ ವರ ಬೇಡಿಕೆ ಇಟ್ಟಿದ್ದು, ಅಲ್ಲಿದ್ದವರಿಗೆ ಅಚ್ಚರಿ ಮೂಡಿಸಿದೆ. ವಿಧಿ ವಿಧಾನಗಳಿಗೂ ಮುನ್ನ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್ ಕಾರ್ಯಕ್ರಮವನ್ನು ಕೇಳಬೇಕು ಎಂದು ವರ ಆಗ್ರಹಿಸಿದ್ದಾರೆ. ವರನ ಈ ಬೇಡಿಕೆಯಿಂದ ತಕ್ಷಣವೇ ದೊಡ್ಡ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ನಂತರ ಮದುವೆಗೆ ಬಂದಿದ್ದ ಎಲ್ಲಾ ಜನರು ಮತ್ತು ವಧು-ವರರು ಪ್ರಧಾನಿಯವರ ಮನ್ ಕಿ ಬಾತ್ ಆಲಿಸಿದರು. ಇದರ ನಂತರ, ಮದುವೆಯ ಉಳಿದ ಆಚರಣೆಗಳನ್ನು ನಡೆಸಲಾಯಿತು.
ವಾಸ್ತವವಾಗಿ, ಪೋರ್ವಾಲ್ ಕುಟುಂಬದ ವಿವಾಹ ಕಾರ್ಯಕ್ರಮವು ಭಿಲ್ವಾರದ ಖಾಸಗಿ ರೆಸಾರ್ಟ್‌ನಲ್ಲಿ ನಡೆಯುತ್ತಿತ್ತು. ಇದೇ ವೇಳೆ ವರ ರಿಷಭ್ ಮದುವೆ ವಿಧಿವಿಧಾನಗಳನ್ನು ಮಧ್ಯದಲ್ಲೇ ನಿಲ್ಲಿಸಿ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್ ಕೇಳಬೇಕು ಎಂದು ಷರತ್ತು ಹಾಕಿದರು.
ಮೊದಮೊದಲು ರಿಷಭ್‌ನ ಈ ಬೇಡಿಕೆ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದರು. ಇದಾದ ತಕ್ಷಣವೇ ದೊಡ್ಡ ಎಲ್‌ಇಡಿ ಪರದೆಯನ್ನು ವ್ಯವಸ್ಥೆಗೊಳಿಸಲಾಯಿತು. ನಂತರ ಕುಟುಂಬ ಮತ್ತು ಸಂಬಂಧಿಕರು ಸೇರಿದಂತೆ ಎಲ್ಲರೂ ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಆಲಿಸಿದರು.
ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ಮುಗಿದ ನಂತರ ಉಳಿದ ವಿಧಿವಿಧಾನಗಳೂ ಮುಗಿದವು. ಮೊದಲ ಸಂಚಿಕೆಯಿಂದ ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಕೇಳುತ್ತಿದ್ದೇನೆ ಎಂದು ರಿಷಬ್ ಹೇಳಿದ್ದಾರೆ. ಅವರು ಇಲ್ಲಿಯವರೆಗೆ ಒಂದೇ ಒಂದು ಸಂಚಿಕೆಯನ್ನು ಮಿಸ್ ಮಾಡಿಲ್ಲ. ಇಂದು ೧೦೦ನೇ ಸಂಚಿಕೆಯಾಗಿದ್ದು, ಇಂದು ವಿವಾಹ ವಿಧಿವಿಧಾನಗಳು ನೆರವೇರಿದವು. ಮನ್ ಕಿ ಬಾತ್ ನ ೧೦೦ನೇ ಸಂಚಿಕೆಯನ್ನು ಮಿಸ್ ಮಾಡಿಕೊಳ್ಳಲು ಇಷ್ಟವಿರಲಿಲ್ಲ. ಅದಕ್ಕಾಗಿಯೇ ಮತ್ತೆ ಎಲ್‌ಇಡಿ ವ್ಯವಸ್ಥೆ ಮಾಡಿ ನಂತರ ಎಲ್ಲರೂ ಮನ್ ಕಿ ಬಾತ್ ಕಾರ್ಯಕ್ರಮವನ್ನು ಆಲಿಸಿದರು.