
ಚಂಡಿಗಢ,ಮೇ.೧೨-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಜುಕೇಶನ್‌ನಲ್ಲಿರುವ ನರ್ಸಿಂಗ್ ವಿದ್ಯಾರ್ಥಿಗಳನ್ನು ಏಪ್ರಿಲ್ ೩೦ ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಪಠ್ಯಕ್ರಮದ ಭಾಗವಾಗಿ ಹಾಜರಾಗುವಂತೆ ಸೂಚಿಸಲಾಗಿತ್ತು ಎನ್ನುವ ಸಂಗತಿ ಬಯಲಾಗಿದೆ.
ಪಿಜಿಐಎಂಇಆರ್ ಅಧಿಕಾರಿಗಳು ಈ ಬಗ್ಗೆ ನೀಡಿದ ಸ್ಪಷ್ಟೀಕರಣ ಹೇಳಿಕೆಯಲ್ಲಿ ದಿನನಿತ್ಯದ ಪಠ್ಯಕ್ರಮದ ಭಾಗವಾಗಿ ಮನ್ ಕಿ ಬಾತ್ ಸಂಚಿಕೆ ಆಲಿಸಲು ಮತ್ತು ನರ್ಸಿಂಗ್ ವಿದ್ಯಾರ್ಥಿಗಳ ಹಾಜರಾತಿ ಸುಲಭಗೊಳಿಸುವ ಗುರಿ ಹೊಂದಲಾಗಿತ್ತು ಎಂದು ಹೇಳಲಾಗಿದೆ.
ಏಪ್ರಿಲ್ ೩೦ ರಂದು ಮನ್ ಕಿ ಬಾತ್ ಕಾರ್ಯಕ್ರಮದ ೧೦೦ ನೇ ಸಂಚಿಕೆಯಲ್ಲಿ ಭಾಗವಹಿಸಲು ೩೬ ಬೋರ್ಡಿಂಗ್ ವಿದ್ಯಾರ್ಥಿಗಳು ಆದೇಶ ಉಲ್ಲಂಘಿಸಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಪಿಜಿಐಎಂಇಆರ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಸೂಚನೆಯು ಅವರ ದಿನನಿತ್ಯದ ಪಠ್ಯಕ್ರಮದ ಭಾಗವಾಗಿ ಹೇಳಲಾದ ಸಂಚಿಕೆಗೆ ನರ್ಸಿಂಗ್ ವಿದ್ಯಾರ್ಥಿಗಳ ಹಾಜರಾತಿ ಸುಲಭಗೊಳಿಸುವ ಗುರಿ ಹೊಂದಿದೆ ಎಂದು ಹೇಳಿದೆ.
ನರ್ಸಿಂಗ್ ವಿದ್ಯಾರ್ಥಿಗಳು ದಿನನಿತ್ಯದ ಪಠ್ಯಕ್ರಮದ ಭಾಗವಾಗಿ ಮನ್ ಕಿ ಬಾತ್ ಸಂಚಿಕೆ ಆಲಿಸಲು ನರ್ಸಿಂಗ್ ವಿದ್ಯಾರ್ಥಿಗಳ ಹಾಜರಾತಿ ಸುಲಭಗೊಳಿಸುವ ಗುರಿ ಹೊಂದಿದೆ, ಇದರಲ್ಲಿ ನಿಯಮಿತ ಮಾತುಕತೆಗಳು, ಅತಿಥಿ ಉಪನ್ಯಾಸಗಳು ಮತ್ತು ಮೌಲ್ಯಯುತ ಶಿಕ್ಷಣವನ್ನು ನೀಡಲು ಹೆಸರಾಂತ ಭಾಷಣಕಾರರು, ತಜ್ಞರು ಮತ್ತು ವೃತ್ತಿಪರರ ಚರ್ಚೆಗಳು ಸೇರಿವೆ ಎಂದು ಹೇಳಿದೆ.
ಉಪನ್ಯಾಸ ಮಂದಿರದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದರೂ ಅಧಿವೇಶನಕ್ಕೆ ಹಾಜರಾಗದ ಮತ್ತು ಗೈರುಹಾಜರಾಗಲು ಯಾವುದೇ ಕಾರಣ ನೀಡದ ಕೆಲವು ವಿದ್ಯಾರ್ಥಿಗಳ ವಿರುದ್ಧ ಕಾಲೇಜು ಅಧಿಕಾರಿಗಳು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಾಲೇಜು ಅಧಿಕಾರಿಗಳ ಕಡೆಯಿಂದ ಸ್ವಲ್ಪ ಅತಿರೇಕ ನಡೆ ಎಂದು ಒಪ್ಪಿಕೊಳ್ಳಲಾಗಿದೆ. ಈಗಾಗಲೇ ಪಿಜಿಐಎಂಈಆರ್ ಆಡಳಿತದ ಅಸಮಾಧಾನವನ್ನು ಸಂಬಂಧಪಟ್ಟವರಿಗೆ ತಿಳಿಸಲಾಗಿದೆ.
ಮನ್ ಕಿ ಬಾತ್ ಕಾರ್ಯಕ್ರಮದ ೧೦೦ ನೇ ಸಂಚಿಕೆಗೆ ಹಾಜರಾಗಲು ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎನ್ ಇಎನ್ ಇ ನಲ್ಲಿನ ೩೬ ಬೋರ್ಡಿಂಗ್ ವಿದ್ಯಾರ್ಥಿಗಳ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.