ಮನ್ನೂರ ಆಸ್ಪತ್ರೆಯ ಕಾರ್ಯಕ್ಕೆ ಸಂಸದ ಡಾ. ಜಾಧವ ಶ್ಲಾಘನೆ

ಕಲಬುರಗಿ :ಆ.21: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಇಂಡಿಯ ಪೋಸ್ಟ ನಲ್ಲಿ ಬರುವ ಸುಖನ್ಯ ಸಮೃದ್ದಿ ಯೋಜನೆಯ ಅಡಿಯ ಕಾರ್ಯಕ್ರಮದಡಿ ಬಡ ಕುಂಟುಂಬದ 125 ಹೆಣ್ಣು ಮಕ್ಕಳಿಗೆ ದತ್ತು ಪಡೆದು 15 ವರ್ಷಗಳ ವರೆಗೆ ಆ ಯೋಜನೆಯ ಕಂತಿನ ಹಣವನ್ನು ಪಾವತಿಸುತ್ತಿರುವ ಮನ್ನೂರ ಆಸ್ಪತ್ರೆಯ ಕಾರ್ಯ ಶ್ಲಾಘನೀಯ ವಾಗಿದೆ ಎಂದು ಕಲಬುರಗಿ ಸಂಸದ ಡಾ; ಉಮೇಶ ಜಾಧವ ಹೇಳಿದ್ದರು,

ಕಲಬುರಗಿ ನಗರದ ರಿಂಗ್ ರಸ್ತೆಯಲ್ಲಿರುವ ಮನ್ನೂರ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಯ ಸಭಾಂಗಣದಲ್ಲಿ ಇಂಡಿಯ ಪೋಸ್ಟ ನಲ್ಲಿ ಬರುವ ಸುಖನ್ಯ ಸಮೃದ್ದಿ ಯೋಜನೆಯ ಕಾರ್ಯಕ್ರಮದಡಿ ಮನ್ನೂರ ಆಸ್ಪತ್ರೆಯ ವತಿಯಿಂದ ದತ್ತು ಪಡೆದ ಬಡ ಕುಂಟುಂಬದ 125 ಹೆಣ್ಣು ಮಕ್ಕಳಿಗೆ ಪಾಸ್ ಬುಕ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮನ್ನೂರ ಆಸ್ಪತ್ರೆ ಆರೋಗ್ಯ ಕ್ಷೇತ್ರದೊಂದಿಗೆ ಸಮಾಜಿಕ ಸೇವೆಯಲ್ಲಿ ಕೂಡ ಸದಾ ಮುಂದೆ ಇದ್ದು ಬೇಸಿಗೆ ಕಾಲದಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದಲ್ಲಿ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು, ಕಲಬುರಗಿ ಜಿಲ್ಲೆಯ 500 ಕ್ಷಯ ರೋಗಿಗಳಿಗೆ ದತ್ತು ಪಡೆದು ಉಚಿತ ಪೌಷ್ಟಿಕ ಆಹಾರ ವಿತರಿಸಿರುವ ಹಿನ್ನಲೆ ಇವರ ಈ ಕಾರ್ಯಕ್ಕೆ ಗವರ್ನರ ಇ ಕ್ಷಯ ಮಿತ್ರ ಪ್ರಶಸ್ತಿ ನೀಡಿ , ಬೇಸಿಗೆ ಕಾಲದಲ್ಲಿ ಕಲಬುರಗಿ ನಗರದ ಬಿದಿ ಬದಿ ವ್ಯಾಪಾರಿಗಳಿಗೆ ದೊಡ್ಡ ಛತ್ರಿ ನೀಡಿದ್ದರು. ಟ್ರಾಫಿಕ್ ಪೆÇೀಲಿಸರಿಗೆ ಹೆಲ್ಮಟ್ ವಿತರಣೆ ಮಾಡಿದ್ದರು. ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುವ ಮೂಲಕ ಉಚಿತ ಔಷದಿ ವಿತರಣೆ ಮಾಡುತ್ತಿದ್ದಾರೆ. ಬಡ ರೋಗಿಗಳ ಅನೂಕುಲಕ್ಕಾಗಿ ಹೆಲ್ತ ಕಾರ್ಡ ವಿತರಣೆ ಮಾಡಿದ್ದು ಇವರ ಸಮಾಜಿಕ ಕಾರ್ಯ ಶ್ಲಾಘನಿಯವಾಗಿದೆ ಎಂದರು. ಇಂಡಿಯ ಪೋಸ್ಟ ಅಡಿಯಲ್ಲಿ 399 ರೂ ಅಪಘಾತ ವಿಮೆ, ಮಹಿಳಾ ಸಮ್ಮಾನ ಯೋಜನೆ ಸೇರಿದಂತೆ ಅನೇಕ ಯೋಜನೆಗಳಿದ್ದು ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದರು.

ಈ ಸಂದರ್ಭದಲ್ಲಿ ಮನ್ನೂರ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಮನ್ನೂರ, ಇಂಡಿಯ ಪೋಸ್ಟ ಕಲಬುರಗಿಯ ಅಂಚೆ ಅಧಿಕ್ಷಕರಾದ ವಿ.ವಿ.ಸ್ವಾಮಿ, ಡಾ. ಮುಜಮಿಲ್ಲ, ಡಾ. ಸಫಿಯಾ, ಡಾ. ಮಿನಾಜ್, ಡಾ. ಮತೀನ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು


ಮನ್ನೂರ ಆಸ್ಪತ್ರೆ ಆರೋಗ್ಯ ಕ್ಷೇತ್ರದ ಜೊತೆಗೆ ಸಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬರುತ್ತಿದ್ದು ಅದರಂತೆ ಸುಖನ್ಯ ಸಮೃದ್ದಿ ಯೋಜನೆಯ ಅಡಿಯ ಕಾರ್ಯಕ್ರಮದಡಿ ಬಡ ಕುಂಟುಂಬದ 125 ಹೆಣ್ಣು ಮಕ್ಕಳಿಗೆ ದತ್ತು ಪಡೆದು 15 ವರ್ಷಗಳ ವರೆಗೆ ಆ ಯೋಜನೆಯ ಕಂತಿನ ಹಣವನ್ನು ಪಾವತಿಸಲು ನಿರ್ಧರಿಸಲಾಗಿದೆ ಅದರಂತೆ ಫಲಾನುಭವಿಗಳಿಗೆ ಪಾಸ್ ಬುಕ್ ವಿತರಣೆ ಮಾಡಲಾಯಿತ್ತು.

ಡಾ.ಫಾರುಕ್ ಮನ್ನೂರ

ಮುಖ್ಯಸ್ಥರು ಮನ್ನೂರ ಆಸ್ಪತ್ರೆ ಕಲಬುರಗಿ