ಮನ್ನಾಯಿಖೆಳ್ಳಿ ಆಸ್ಪತ್ರೆಗೆ ಭೇಟಿ

ಬೀದರ:ಮೇ.20: ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪೂರ ಅವರು ನಿನ್ನೆ ಹುಮನಾಬಾದ್ ತಾಲೂಕಿನ ಮನ್ನಾಯಿಖೆಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯ ರೋಗಿಗಳ ಆರೋಗ್ಯ ಸ್ಥಿತಿಗತಿ ವಿಚಾರಿಸಿದರು. ಕೋವಿಡ್ ಸೇರಿದಂತೆ ಇತರೆ ರೋಗಿಗಳಿಗೆ ಯಾವುದೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು. ಸ್ಥಳಿಯ ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಲ್ಲಿಯ ಗ್ರಾಮ ಪಂಚಾಯತ್ ಸದಸ್ಯರು ಹಾಜರಿದ್ದರು.