ಮನ್ನಾಏಖೆಳ್ಳಿಯಲ್ಲಿ ಟ್ರಾಮಾ ಕೇರ್‍ಸೆಂಟರ್ ಸ್ಥಾಪಿಸಿ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

ಬೀದರ್,ಜು 19: ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೆಳ್ಳಿ ಮತ್ತು ಹುಮನಾಬಾದ ರಸ್ತೆ ನಡುವೆ ಅಪಘಾತ ಸಂಭವಿಸಿ ಗಾಯಗಳಿಂದ ಬಳಲುವ ಜನರ ಹೆಚ್ಚಿನ ಚಿಕಿತ್ಸೆಗಾಗಿ ಸೊಲಾಪುರ ಹೈದರಾಬಾದ ಹೋಗುವ ಪರಿಸ್ಥಿತಿ ತಪ್ಪಿಸಲು ಬಡವರ ಹಣ ಉಳಿಸಲು ಮನ್ನಾಏಖೇಳ್ಳಿಯಲ್ಲಿ ಟ್ರಾಮಾ ಕೇರ್ ಸೆಂಟರ ಸ್ಥಾಪಿಸಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸದನ ಕಲಾಪದಲ್ಲಿ ಮನವಿ ಮಾಡಿದರು.
ವಿಧಾನ ಸಭೆ ಅಧಿವೇಶನದಲ್ಲಿ ಬಜೆಟ್ ಮೇಲೆ ಮಾತನಾಡಿದ ಅವರು ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್‍ನಲ್ಲಿ ಬೀದರ್ ಜಿಲ್ಲೆ ಹಾಗೂ ಬೀದರ್ ದಕ್ಷಿಣ ಕ್ಷೇತ್ರಕ್ಕೆ ಅವಶಯಕತೆ ಇರುವ ಸೌಲಭ್ಯ ಕುರಿತು ವಿವರಿಸಿ, ಸಭಾಧ್ಯಕ್ಷರ ಮೂಲಕ ರಾಜ್ಯ ಸರಕಾರಕ್ಕೆ ತಿಳಿಸಿದರು.
ಬೀದರ್ ದಕ್ಷಿಣ ಕ್ಷೇತ್ರದಲ್ಲಿ ನಡೆದ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪ್ರಿಯಾಂಕಾ ವಾದ್ರಾ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವದಾಗಿ ಹೇಳಿದ್ದರು ಅದು ಬಜೆಟ್‍ನಲ್ಲಿ ಘೋಷಣೆ ಆಗದೆ ಭರವಸೆ ಹುಸಿಯಾಗಿದೆ. ಬೀದರ ದಕ್ಷಿಣ ಕ್ಷೇತ್ರದಲ್ಲಿರುವ ಕರಕನಳ್ಳಿ ಗ್ರಾಮದಲ್ಲಿರುವ ದಟ್ಟ ಅರಣ್ಯ ಪ್ರದೇಶದ ಉದ್ಯಾನವನದಲ್ಲಿ ಅತಿ ಹೆಚ್ಚು ಔಷಧಿ ಗುಣವುಳ್ಳ ಗಿಡಮರಗಳು, ಬಳ್ಳಿಗಳಿವೆ ಈ ಕುರಿತು ಜಿಲ್ಲೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವರ ಗಮನಕ್ಕೆ ತಂದು ಹಣ ಮೀಸಲಿಡಲು ಮನವಿ ಮಾಡಿದ್ದೆ ಆ ವಿಷಯ ಕುರಿತು ಯಾವುದೆ ಹಣ ಮೀಸಲಿಟ್ಟಿಲ್ಲ. ಅದು ಮುಂದಿನ ದಿನಗಳಲ್ಲಿ ಹಣ ಮೀಸಲಿಟ್ಟಿ ಅಭಿವೃದ್ಧಿ ಪಡಿಸಬೇಕು ಎಂದರು. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಈಗಿರುವ ಕೈಗಾರಿಕ ಪ್ರದೇಶ ಹೊರತುಪಡಿಸಿ ಇನ್ನಷ್ಟು ಹೆಚ್ಚಿನ ಭೂಮಿಪಡೆದು ಹೊಸದಾಗಿ ಕೈಗಾರಿಕ ಪ್ರದೇಶ ಪ್ರಾರಂಭಿಸಿ ಯುವಕರಿಗೆ ಉಧ್ಯೋಗ ನೀಡಬೇಕು, ಹೊಸದಾಗಿ ರಚನೆಯಾದ ತಾಲ್ಲೂಕುಗಳಿಗೆ ಸೌಲಭ್ಯ, ಬೀದರ್ ದಕ್ಷಿಣ ಕ್ಷೇತ್ರದಲ್ಲಿರುವ ಎಸ್‍ಸಿ ಎಸ್‍ಟಿ ಪದವಿ ಕಾಲೇಜಿಗೆ ಹೆಚ್ಚಿನ ಅನುದಾನ ನೀಡಬೇಕು, ಕಾರಂಜಾ ಜಲಾಶಯದ ನೀರು ರೈತರ ಭೂಮಿಗೆ ನೀಡಬೇಕು ಎಂದು ಮನವಿ ಮಾಡಿದರು. ಪ್ರತಿಯೊಂದು ಗ್ರಾಮಗಳಲ್ಲಿರು ಪಿಎಚ್‍ಸಿ ಜತೆ ಹೋಮಿಯೋಪತಿಕ ಹಾಗೂ ಆಯುರ್ವೇದ ವೈದ್ಯರಿಗೆ ಚಿಕಿತ್ಸೆ ನೀಡಲು ಅವಕಾಶ ನೀಡಿದರೆ ಹಳ್ಳಿಗಳಲ್ಲಿ ಜನರಿಗೆ ಉತ್ತಮ ಚಿಕಿತ್ಸೆ ದೊರೆಯುತ್ತದೆ ಎಂದರು. ಕೃಷ್ಣ ಮೃಗ ಸಂರಕ್ಷಣೆಗೆ ಎರಡು ಕೋಟಿ ಮೀಸಲಿಟ್ಟಿದ್ದು ಉತ್ತಮ ಕಾರ್ಯ. ಬೀದರ್ ಜಿಲ್ಲೆಯ ಭಾಲ್ಕಿ ಹಾಗೂ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ಕೃಷ್ಣಮೃಗ ವಾಸಿಸುತ್ತವೆ ಮುಂದಿನ ದಿನಗಳಲ್ಲಿ ಉತ್ತಮ ಸಂರಕ್ಷಣೆಯಾಗುವ ಭರವಸೆ ಇದೆ ಎಂದು ತಿಳಿಸಿದರು.