ಮನ್ನಳ್ಳಿ ಪಬ್ಲಿಕ್ ಶಾಲೆ ಮನ್ನಳ್ಳಿಯಲ್ಲಿ ಶಾಲಾ ವಾರ್ಷಿಕೋತ್ಸವ ಆಚರಣೆ

ಬೀದರ :ಮಾ.2:ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಮನ್ನಳ್ಳಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಕೇಂದ್ರ ನೂತನ ಹಾಗೂ ನವೀಕರಿಸಬಹುದಾದ ಇಂಧನಮೂಲ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವರು ಭಾರತ ಸರಕಾರ ಸಚಿವರಾದ ಶ್ರೀ ಭಗವಂತ ಖೂಬಾ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಜ್ಞಾನ ಸಂಗಮ ಶಿಕ್ಷಣ ಸಂಸ್ಥೆಯು 1996-97ನೇ ಸಾಲಿನಲ್ಲಿ ಆರಂಭವಾಗಿ ಮನ್ನಳ್ಳಿಯಲ್ಲಿ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಶಿಕ್ಷಣ ನೀಡುವುದರ ಜೊತೆಗೆ ಪಠ್ಯೇತರ ಹಾಗೂ ಇನ್ನೀತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಪಾಠ ಬೋಧನೆ ಮಾಡುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ನಂತರ ಮಾತನಾಡಿದ ಸಮಾರಂಭದ ಮುಖ್ಯ ಅತಿಥಿಗಳು ಸಹಕಾರ ರತ್ನ ಪುರಸ್ಕøತರು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಉಮಾಕಾಂತ ನಾಗಮಾರಪಳ್ಳಿ ರವರು ಮಾತನಾಡಿ ಜಿಲ್ಲಾ ಸಹಕಾರ ಬ್ಯಾಂಕ್ ಜಿಲ್ಲೆಯಲ್ಲಿ ಅತ್ಯತ್ತಮ ಸೇವೆ ಸಲ್ಲಿಸಲು ದಿ: ನಾರಾಯಣರಾವ ಮನ್ನಳ್ಳಿ ಅವರ ಸೇವೆ ಅನನ್ಯವಾದದ್ದು. ಅವರ ಮಕ್ಕಳಾದ ಶ್ರೀ ದೀಪಕ ಎನ್. ಮನ್ನಳ್ಳಿ ಹಾಗೂ ದೀನದಯಾಳ ಎನ್. ಮನ್ನಳ್ಳಿಯವರು ಮನ್ನಳ್ಳಿ ಗ್ರಾಮದಲ್ಲಿ ಶಾಲೆಯನ್ನು ತೆಗೆದು ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಅಧ್ಯಕ್ಷರು ಜಾನಸಂಗಮ ಶಿಕ್ಷಣ ಸಂಸ್ಥೆ ಹಾಗೂ ಪಿ.ಕೆ.ಪಿ.ಎಸ್. ಮನ್ನಳ್ಳಿಯ ಅಧ್ಯಕ್ಷರಾದ ಶ್ರೀ ದೀಪಕ ಎನ್. ಮನ್ನಳ್ಳಿ ರವರು ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಈ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಬೀದರ ಆದ ಶರೀ ಬಸವರಾಜ ಕಾಮಶೆಟ್ಟಿ ಜಿಲ್ಲಾಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಬೀದರ ಆದ ಶರೀ ಅಶೋಕಕುಮಾರ ಕರಂಜಿ ಗಾದಗಿ, ಮಾಜಿ ನಿರ್ದೇಶಕರು ಭಾರತ ಸರಕಾರ ನಿಗಮ (ನಿ) ಬೀದರ ಶ್ರೀ ಸಂಗಮೇಶ ನಾಸಿಗಾರ, ಶಾಲೆಯ ಉಪಾಧ್ಯಕ್ಷರಾದ ದೀನದಯಾಲ ಎನ್. ಮನ್ನಳ್ಳಿ, ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ಎಂ. ಬಿರಾದಾರ ನಿರ್ದೇಶಕರಾದ ಶ್ರೀ ಸಂಜಯ ಅತ್ರೆ ಹಾಗೂ ಆಡಳಿತ ಮಂಡಳಿಯವರು ಮುಖ್ಯ ಗುರುಗಳಾದ ಶ್ರೀ ಸಂತೋಷ ಪಿ. ಕುಲಕರ್ಣಿ ಹಾಗೂ ಸಿಬ್ಬಂದಿ ವರ್ಗದವರು, ಊರಿನ ಗಣ್ಯರಾದ ಶ್ರೀ ನಬಿಸಾಬ ಡಾಂಗೆ ಉಪಾಧ್ಯಕ್ಷರು, ಪಿ.ಎಲ್.ಡಿ. ಬ್ಯಾಂಕ್ ಬೀದರ, ಶ್ರೀ ಎನ್.ಎ. ಖಾದ್ರಿ ಅಧ್ಯಕ್ಷರು ರಾಷ್ಟ್ರೀಯ ದರ್ವೇಶ ಕಮಿಟಿ ಮನ್ನಳ್ಳಿ, ಶ್ರೀ ದೇವೆಂದ್ರಪ್ಪ ಭಾವಿಕಟ್ಟಿ, ಶ್ರೀ ಸಲಾವೊದ್ದೀನ್, ಶ್ರೀ ಶಂಕರಬಾಬು, ರಾಜಕುಮಾರ ಮೂಲಗೆ, ಸುನೀಲ ಜಮಾದಾರ, ಪ್ರಮೋದ ಮೂಲಗೆ, ಯೇಸುದಾಸ, ರಮೇಶ ವಿಶ್ವಕರ್ಮ, ನಿಸಾರ ಅಹ್ಮದ ಹಾಗೂ ಮಕ್ಕಳು ಮತ್ತು ಪಾಲಕರು ಭಾಗವಹಿಸಿದರು.

ಸ್ವಾಗತ ಭಾಷಣ ಮತ್ತು ವಂದನಾರ್ಪಣೆ ಸಂಸ್ಥೆಯ ಖಜಾಂಚಿಗಳಾದ ಶ್ರೀ ಪ್ರಭುಶೆಟ್ಟಿ ಬುಳ್ಳಾ ನೆರವೇರಿಸಿದರು, ಸಂಚಾಲನೆ ಪ್ರಭು ಕೋಟೆ ನಡೆಸಿಕೊಟ್ಟರು, ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.