ಮನ್ನಳ್ಳಿಯಲ್ಲಿ ಬಸ್ ನಿಲ್ದಾಣ ಕಾಮಗಾರಿ ಆರಂಭಿಸಿ

ಬೀದರ್:ಜು.20: ನಗರದ ಹಬ್ಸಿಕೋಟೆ ಅತಿಥಿ ಗೃಹದಲ್ಲಿ ಬೀದರ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಶೋಕ ಖೇಣಿ ಅವರು ಕರ್ನಾಟಕ ಸರ್ಕಾರದ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರಿಗೆ ಭೇಟಿ ಮಾಡಿದರು

ತಮ್ಮ ಶಾಸಕರ ಅವಧಿಯಲ್ಲಿ 2014 ದಕ್ಷಿಣ ಕ್ಷೇತ್ರದ ಮನ್ನಳಿ ಗ್ರಾಮದ ಬಸ್ ನಿಲ್ದಾಣದ ಪ್ರಸ್ತಾವನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.

ನಂತರ ಜಿಲ್ಲಾಧಿಕಾರಿಗಳು ಹಾಗು ಸಾಹಯಕ ಆಯ್ತುಕರು ಕ್ರಮ ಕೈಗೊಂಡು ಬೀದರ ತಹಸೀಲ್ದಾರ ರವರಿಗೆ ಸೂಚಿಸಿ 00 ಎಕರೆ 30 ಗುಂಟೆಯನ್ನು ಸಾರಿಗೆ ಇಲಾಖೆಗೆ ಹಸ್ತಾಂತರಿಸಲಾಗಿತ್ತು.

ತದನಂತರ ಇಲ್ಲಿಯ ವರೆಗು ಈ ಯೋಜನೆಯ ಪ್ರಕ್ರಿಯೆ ಕಾರ್ಯಗತಗೊಳ್ಳಲಿಲ್ಲ. ಮನ್ನಳಿ ಗ್ರಾಮ ಒಂದು ಜಿಲ್ಲಾ ಪಂಚಾಯಿತ ಕ್ಷೇತ್ರವಾಗಿದ್ದು ಶಾಲಾ ಮಕ್ಕಳಿಗೆ ಹಾಗು ಸಾರ್ವಜನಿಕ ಪ್ರಯಾಣಕ್ಕೆ ತೊಂದರೆ ಆಗುತ್ತಿದ್ದು ಶ್ರೀಘ್ರದಲ್ಲಿ ಬಸ್ ನಿಲ್ದಾಣ ಮಾಡಿಕೊಡಬೇಕಾಗಿ ಎಂದು ಮನವಿ ಸಲ್ಲಿಸಿದರು .

ಈ ಸಂದರ್ಭಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಚಂದ್ರಶೇಖರ ಚನಶಟ್ಟಿ, ಕರೀಮ ಸಾಬ ಕಮಠಾಣ, ಎಸ್ಘ ಟಿ ಘಟಕದ ದಕ್ಷಿಣ ಕ್ಷೇತ್ರದ ಅಧ್ಯಕ್ಷರಾದ ಸೂರ್ಯಕಾಂತ ಸಿಂದೋಲ, ಸೇರಿ ಅನೇಕರು ಹಾಜರಿದ್ದರು.