ಮನೋಹರಿ ಚಿತ್ರೀಕರಣ ಕೊಪ್ಪಳ ನಗರದ ಸುತ್ತಮುತ್ತ ಐತಿಹಾಸಿಕ ಸ್ಥಳಗಳಲ್ಲಿ ನಡೆಯುತ್ತದೆ

ಕೊಪ್ಪಳ, ಜೂ.09: ನಗರದ ಸುತ್ತಲಿನ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ಆರ್, ಎಸ್,ಆರ್ ಕ್ರಿಯೇಷನ್ಸ್ ಬ್ಯಾನರ್ ನ ಅಡಿಯಲ್ಲಿ ಮೂಡಿಬರುತ್ತಿರುವ “ಮನೋಹರಿ” ಚಿತ್ರ ಸಸ್ಪೆನ್ಸ್ ಹಾಗೂ ಹಾರ್ರ್ಹಾರ್, ಸಬ್ಜೆಕ್ಟ್ ಒಳಗೊಂಡಿದೆ. ಈ ಚಿತ್ರದ ಪ್ರಮುಖ ಪಾತ್ರಧಾರಿ ಹಾಗೂ ನಾಯಕ ನಟ ದುರ್ಗಸಿಂಹ ಮಾಧ್ಯಮದ ಜೊತೆ ಮಾತನಾಡಿ ಇದೊಂದು ವಿಭಿನ್ನ ಚಿತ್ರವಾಗಲಿದೆ , ನಿರ್ದೇಶಕರು ಉತ್ತಮವಾಗಿ ಕಥೆಯನ್ನ ಮಾಡಿಕೊಂಡಿದ್ದಾರೆ.ನಾನು ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಮಾಧ್ಯಮಕ್ಕೆ ತಿಳಿಸಿದರು. ಈ ಸಂದರ್ಭ ಮಾತನಾಡಿದ ಕೋರಿಯೋ ಗ್ರಾಫರ್ ರಾಘವೇಂದ್ರ ಅರಕೇರಿ ಅವರು ಮಾತನಾಡಿ ಈಗಾಗಲೇ ಅನೇಕರು ಚಿತ್ರರಂಗದಲ್ಲಿ ಗುರುತಿಸಿಕೊಂಡು ಹೆಸರು ಮಾಡಿದ್ದು,ಅದರಂತೆ ಇಂದು ನಮ್ಮ ಕ್ಷೇತ್ರದ ಯುವಕರು ಚಿತ್ರ ನಿರ್ಮಾಣ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ.ನಮ್ಮ ಭಾಗದಲ್ಲಿನ ಎಲ್ಲ ಮಿತ್ರರು ಸೇರಿ ಈ ಚಿತ್ರ ಮಾಡಲು ತಯ್ಯಾರಾಗಿದ್ದೆವೆ, ಚಿತ್ರೀಕರಣ ಇನ್ನೇನು ಮುಗಿಯುವ ಹಂತಕ್ಕೆ ಬಂದಿದ್ದು ಶೀಘ್ರವಾಗಿ ತೆರೆ ಕಾಣಲಿದೆ ಇದಕ್ಕೆ ನಾಡಿನ ಎಲ್ಲರು ಸಹಕರಿಸುವ ಮೂಲಕ ಚಿತ್ರ ತಂಡಕ್ಕೆ ಆಶೀರ್ವದಿಸಿ ಯಶಸ್ವಿಗೊಳಿಸಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ನಿರ್ಮಾಪಕರು, ರಾಜಶೇಖರ್ ರೆಡ್ಡಿ ಸಹ ನಿರ್ಮಾಪಕರು, ಮಾರುತಿ ಬಹದ್ದೋರ್ ಬಂಡಿ ಯಮನುರಪ್ಪ, ನಿಂಗಮ್ಮ ಹಾಗೂ ಛಾಯಾಗ್ರಾಹಕರು,ಮೈಲಾರಿ ಸಹಾಯಕ ಛಾಯಾಗ್ರಾಹಕರು ಸಂಪತ್ ರೆಡ್ಡಿ ಸಾಹಿತ್ಯ ಮತ್ತು ಸಂಗೀತ, ಎಸ್, ಸಾಗರ್ ಸಂಕಲನ ರಾಜಶೇಖರ್ ರೆಡ್ಡಿ ಮುಖ್ಯ ತಾರಾ0ಗಣದಲ್ಲಿ ದುರ್ಗ ಸಿಂಹ(ನಾಯಕ), ಮಾನಸ (ನಾಯಕಿ)ನಿರ್ದೇಶಕ ಮುದ್ದು ಕೃಷ್ಣ ಎ. ಟಿ ಮುಂತಾದವರು ಉಪಸ್ಥಿತಿ ಇದ್ದರು. ಈ ಚಿತ್ರತಂಡಕ್ಕೆ ಆಶೀರ್ವದಿಸಿ ನಮ್ಮನ್ನು ಬೆಳೆಸಬೇಕು ಎಂದು ಕೋರಿದರು.