ಮನೋವಿಜ್ಞಾನ ಪ್ರದರ್ಶನ

ಕಲಬುರಗಿ ಆ 6: ನಗರದ ಖಾಜಾ ಬಂದನವಾಜ್ ವಿಶ್ವವಿದ್ಯಾಲಯದ ಮನಶಾಸ್ತ್ರ ವಿಭಾಗದಿಂದ ಮನೋವಿಜ್ಞಾನ ಪ್ರದರ್ಶನ-2022 ವನ್ನು ಆಯೋಜಿಸಲಾಯಿತು.ಪ್ರದರ್ಶನವನ್ನು ಎಸ್‍ಎಎಚ್ ಪಿಯು ಕಾಲೇಜು ಪ್ರಾಂಶುಪಾಲ ಖುದ್ಸಿಯಾ ಪರ್ವೀನ್ ಉದ್ಘಾಟಿಸಿದರು.
ಇಂದಿನ ಸನ್ನಿವೇಶದಲ್ಲಿ ಮನೋವಿಜ್ಞಾನವು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಏಕೆಂದರೆ ವ್ಯಕ್ತಿಗಳು ಅನೇಕ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರದರ್ಶನದ ಮುಖ್ಯ ವಿಷಯವೆಂದರೆ ಜನರನ್ನು ತಲುಪುವುದು ಮತ್ತು ಅವರಿಗೆ ಮನೋವಿಜ್ಞಾನದ ಪ್ರಾಮುಖ್ಯತೆ ಮತ್ತು ವ್ಯಾಪ್ತಿಯನ್ನು ತಿಳಿಸುವುದು .ಒತ್ತಡ, ಯುವಕರ ಸಮಸ್ಯೆ, ಸಾಧನೆಯ ಪ್ರೇರಣೆ, ಅಸ್ವಸ್ಥತೆಗಳು ಆತಂಕ, ಫೆÇೀಬಿಯಾ ಮುಂತಾದ ಕೆಲವು ವಿಷಯಗಳನ್ನು ತೆಗೆದುಕೊಂಡು ಇತರರಿಗೆ ಸಹಾಯ ಮಾಡಲು ನಾವು ಯೋಚಿಸಿದ್ದೇವೆ ಎಂದು ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಮನಿಷಾ ಪಾಟೀಲ್ ತಿಳಿಸಿದರು. ಪ್ರದರ್ಶನ ವಿಷಯಗಳ ಕುರಿತಾಗಿ ವಿದ್ಯಾರ್ಥಿಗಳು ವಿವಿಧ ಅಂಶಗಳನ್ನು ಪ್ರೇಕ್ಷಕರಿಗೆ ವಿವರಿಸಿದರು.ಹಲವಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.