ಮನೋವಿಜ್ಞಾನದ ವಿಶೇಷ ಉಪನ್ಯಾಸ ಕಾರ್ಯಕ್ರಮ

ಹುಬ್ಬಳ್ಳಿ,ಏ18: ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ವಿದ್ಯಾನಗರ ಹುಬ್ಬಳ್ಳಿ ಹಾಗೂ ಶ್ರೀ ಅರಬಿಂದೊ ಸೊಸೈಟಿ ಸಿ.ಬಿ.ನಗರ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮನೋವಿಜ್ಞಾನದ ವೈದ್ಯ, ಶಿಕ್ಷಣ ತಜ್ಞ, ತತ್ವಜ್ಞಾನಿ ಹಾಗೂ ಪ್ರಸಿದ್ಧ ವಾಗ್ಮಿಗಳಾದ ಡಾ ಆಲೋಕ ಪಾಂಡೆ ಅವರು ಮಾನವಿಯ ಮೌಲ್ಯ, ಮಹಿಳಾ ಸಬಲೀಕರಣ, ಮಾನಸಿಕÀ ಆರೋಗ್ಯ ಹಾಗೂ ಆಧಾತ್ಮಿÀ್ಮಕತೆಯ ವಿಷಯಗಳ ಕುರಿತು ಉಪನ್ಯಾಸವನ್ನು ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಅರವಿಂದರ ಕುರಿತು ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದ ಆಧ್ಯಕ್ಷತೆಯನ್ನು ಸಹಾಯಕ ಪ್ರಾಧ್ಯಾಪಕರಾದ ಡಾ ಬಸವರಾಜ ಹಳೆಮನಿ ಅವರು ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಡಾ ಜಯಶ್ರೀ. ಸಿ. ಕುಂದಗೋಳಮಠ ಅÀವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ ಆಲೋಕ ಪಾಂಡೆ, ಎಂ.ಬಿ ನರವಣಿ ಹಾಗೂ ಡಾ ಬಸವರಾಜ ಹಳೆಮನಿ ಅವರನ್ನು ಸಭಿಕರಿಗೆ ಪರಿಚಯಿಸಿದರು. ಹುಬ್ಬಳ್ಳಿಯ ಶ್ರೀ ಅರಬಿಂದೊ ಸೊಸೈಟಿಯ ಕಾರ್ಯದರ್ಶಿಗಳಾದ ಎಂ.ಬಿ ನರವಣಿ ಅವರು ಹುಬ್ಬಳ್ಳಿಯ ಶ್ರೀ ಅರಬಿಂದೊ ಸೊಸೈಟಿಯ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಯಾದ ಶಿಲ್ಪಾ ಕೆ ಅವರು ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರೆ, ವಂದನಾರ್ಪನೆಯನ್ನು ಐಶ್ವರ್ಯ ಗಾಣಿಗೇರ ಮಾಡಿದರು.