ಮನೆ ಹಿಂಬಾಗಿಲು ಕೊಂಡಿ ಮುರಿದು 2.03 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಆ.29-ಮನೆಯ ಹಿಂಬಾಗಿಲು ಕೊಂಡಿ ಮುರಿದು 2.03 ಲಕ್ಷ ರೂ.ಮೌಲ್ಯದ ನಗ-ನಾಣ್ಯ ದೋಚಿಕೊಂಡು ಹೋಗಿರುವ ಘಟನೆ ಶೇಖರೋಜಾದಲ್ಲಿ ನಡೆದಿದೆ.
ಪಿಡಿಓ ರಾಚಣ್ಣಗೌಡ ಪಾಟೀಲ ಎಂಬುವವರೆ ಮನೆಯೇ ಕಳ್ಳತನಾಗಿದ್ದು, ಮನೆಯಲ್ಲಿ ಎಲ್ಲರು ಮಲಗಿದ್ದ ವೇಳೆ ಕಳ್ಳರು ಮನೆಯ ಹಿಂಬಾಗಿಲು ಕೊಂಡಿ ಮುರಿದು 1.50 ಲಕ್ಷ ರೂ.ಮೌಲ್ಯದ 30 ಗ್ರಾಂ.ಬಂಗಾರದ ಎರಡೆಳೆಯ ಸರ, 50 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ತಾಳಿ, 3 ಸಾವಿರ ರೂ.ನಗದು ದೋಚಿಕೊಂಡು ಹೋಗಿದ್ದಾರೆ.
ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.