ಮನೆ ಹತ್ತಿರವೇ ಸಿಗಲಿದೆ ಕರೋನಾ ಲಸಿಕೆ: ಬಸವರಾಜ ಹೆಳವರ

ಕಲಬುರಗಿ:ಮೇ.28: ಇತ್ತೀಚೆಗೆ ಹಿರಿಯ ನಾಗರಿಕರಿಗೆ ಮತ್ತು ದಿವ್ಯಾಂಗರಿಗೆ “ನಿಯರ್ ಟು ಹೋಮ್ ” ಕೋವಿಡ್ ಲಸಿಕಾ ಕೇಂದ್ರ (ಎನ್.ಎಚ್.ಸಿ.ವಿ.ಸಿ) ಸ್ಥಾಪಿಸುವಂತೆ ಕೇಂದ್ರ ಸಚಿವಾಲಯದ ತಾಂತ್ರಿಕ ತಜ್ಞರ ಸಮಿತಿ ಮಾಡಿದ ಶಿಪಾರಸ್ಸಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಇಲ್ಲಿಯವರೆಗೆ ಕರೋನಾ ಲಸಿಕೆ ತೆಗೆದುಕೊಳ್ಳದ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವೈದ್ಯಕೀಯ ಪರಿಸ್ಥಿತಿವುಳ್ಳವರು ಹಾಗೂ ವಿವಿಧ ರೀತಿಯ ದಿವ್ಯಾಂಗರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಹಿರಿಯ ನಾಗರಿಕರಿಗೆ ಹಾಗೂ ದಿವ್ಯಾಂಗರಿಗೆ ಕರೋನಾ ಲಸಿಕೆ ಪಡೆಯುವುದನ್ನು ಸುಲಭಗೊಳಿಸುವ ಉದ್ದೇಶದಿಂದ ಇತ್ತೀಚೆಗೆ ಕೇಂದ್ರ ಸರ್ಕಾರವು ಮನೆ ಸಮೀಪ ಲಸಿಕಾ ಕೇಂದ್ರ ಸ್ಥಾಪನೆ ಮಾಡುವಂತೆ ಗುರುವಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕೇಂದ್ರ ಸರ್ಕಾರದ ಈ ಕ್ರಮ ಸ್ವಾಗತಾರ್ಹವಾದದು ಎಂದು ಡಿಸೆಬಲ್ಡ ಹೆಲ್ಪಲೈನ್ ಪೌಂಡೆಶನನ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ತಿಳಿಸಿದರು.